Advertisement

ಟಿಪ್ಪರ್‌ ಬ್ರೇಕ್‌ ರಿಪೇರಿ ಮಾಡುತ್ತಿದ್ದ ವೇಳೆ ಚಾಲಕನ ಯಡವಟ್ಟು: ಮೆಕ್ಯಾನಿಕ್‌ ಬಲಿ

12:51 PM Jun 16, 2022 | Team Udayavani |

ಕುಷ್ಟಗಿ: ಟಿಪ್ಪರ್ ಬ್ರೇಕ್‌ ರಿಪೇರಿ ಮಾಡುತ್ತಿರುವ ವೇಳೆ ಚಾಲಕನ ಎಡವಟ್ಟಿಗೆ ಮೆಕ್ಯಾನಿಕ್ ಬಲಿಯಾದ ಘಟನೆ ಗುರುವಾರ (ಜೂ.16) ಕೃಷ್ಣಗಿರಿ ಕಾಲೋನಿಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ .

Advertisement

ಪಟ್ಟಣ ಹೊರವಲಯದ ಕೃಷ್ಣಗಿರಿ ಕಾಲೋನಿಯ ಪರಶುರಾಮ್ ಗ್ಯಾರೇಜ್ ನ ಶಿವಪ್ಪ ರಾಮಣ್ಣ ಬೂದರ (33) ಮೃತ ದುರ್ದೈವಿ.

ಗುರುವಾರ ಬೆಳಗ್ಗೆ ರಾಮಣ್ಣ ಬೂದರ ಟಿಪ್ಪರ್ ಅಡಿಯಲ್ಲಿ ಮಲಗಿ ಬ್ರೇಕ್ ರಿಪೇರಿ ಮಾಡುತ್ತಿದ್ದರು. ಈ ಸಂದರ್ಭ ಟಿಪ್ಪರ್ ಚಾಲಕ ವಾಹನ ಚಾಲು ಮಾಡಿದ್ದರಿಂದ ಟಿಪ್ಪರ್ ಮುಂದೆ ಹೋಗಿದ್ದು, ಟಿಪ್ಪರ್ ಟೈರ್  ರಾಮಣ್ಣ ಬೂದರ ತಲೆ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ‌ನಡೆದಿದ್ದು, ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:ಮಂಗಳೂರು: ಬಾಲ್ಕನಿಯ ಕರ್ಟನ್‌ ಸರಿಪಡಿಸುವ ವೇಳೆ 5ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next