Advertisement

ಭಾರತ ರತ್ನ ಪ್ರಣಬ್‌ ಮುಖರ್ಜಿ ನಡೆದು ಬಂದ ಹಾದಿ

03:45 PM Sep 01, 2020 | Karthik A |

ಮಣಿಪಾಲ: ಭಾರತದ ರಾಜಕೀಯ ಇತಿಹಾಸದಲ್ಲಿ ಐದು ದಶಕಗಳ ಕಾಲ ಸೇವೆ ಸಲ್ಲಿಸಿದವರು ಪ್ರಣಬ್ ಮುಖರ್ಜಿ. ಮುಖರ್ಜಿ ಅವರು ಬೆಂಗಾಲಿ ಕುಟುಂಬದಲ್ಲಿ 1935ರ ಡಿಸೆಂಬರ್ 11ರಂದು ಮಿರಾಟಿ ಹಳ್ಳಿಯಲ್ಲಿ ಜನಿಸಿದ್ದರು. ಇವರ ತಂದೆ ಕಾಮಾದಾ ಕಿಂಕರ್ ಮುಖರ್ಜಿ ಅವರು ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ತಾಯಿ ರಾಜಲಕ್ಷ್ಮಿ ಮುಖರ್ಜಿ.

Advertisement

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಆಗಿರುವ ಮುಖರ್ಜಿ ಭಾರತ ಸರ್ಕಾರದಲ್ಲಿ ಹಲವಾರು ಪ್ರಮುಖ ಸಚಿವ ಸ್ಥಾನ ನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2009ರಿಂದ 2012ರವರೆಗೆ ವಿತ್ತ ಸಚಿವರಾಗಿ ಅವ ಕಾರ್ಯನಿರ್ವಹಿಸಿದ್ದರು. 2019ರಲ್ಲಿ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿಗೆ ಮುಖರ್ಜಿ ಭಾಜನರಾಗಿದ್ದರು. 2012ರಿಂದ 2017ರವರೆಗೆ ದೇಶದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.  ಇಲ್ಲಿ ಅವರು ನಡೆದು ಬಂದ ಹಾದಿಯ ಕಿರು ಪರಿಚಯ ನೀಡಲಾಗಿದೆ.

ಜನನ: ಬ್ರಿಟಿಷ್‌ ಭಾರತದ ಅವಧಿಯಲ್ಲಿ ಬಂಗಾಲ ಪ್ರಾಂತ್ಯದಲ್ಲಿ (ಪಶ್ಚಿಮ ಬಂಗಾಲದ ಬಿರಭೂಮ್‌ ಜಿಲ್ಲೆ) 1935ರ ಡಿಸೆಂಬರ್‌ 11ರಂದು ಜನನ.
ತಂದೆ: ಕೆ.ಕೆ. ಮುಖರ್ಜಿ (ಸ್ವಾತಂತ್ರ್ಯ ಚಳುವಳಿಗಾರ) ತಾಯಿ: ರಾಜ್‌ಲಕ್ಷ್ಮೀ ಮುಖರ್ಜಿ
ಶಿಕ್ಷಣ: ಸುರಿಯಲ್ಲಿನ ವಿದ್ಯಾಸಾಗರ ಕಾಲೇಜಿನಲ್ಲಿ ಶಿಕ್ಷಣ, ಕೋಲ್ಕತ್ತಾ ವಿಶ್ವವಿದ್ಯಾಲಯ. ಎಂಎ (ಇತಿಹಾಸ), ಡಿಬ್ರುರ್ಗ ವಿ.ವಿ., ಅಸ್ಸಾಂ ಇದರಿಂದ ಅಂತಾರಾಷ್ಟ್ರೀಯ ವ್ಯವಹಾರ ವಿಷಯದ ಮೇಲೆ ಸ್ನಾತಕೋತ್ತರ ಪದವಿ. University of Wolverhampton ನಿಂದ 2011ರಲ್ಲಿ ಡಿಲಿಟ್‌ ಪದವಿ
ವೃತ್ತಿ: ಆರಂಭದಲ್ಲಿ ಕೋಲ್ಕತಾದ ಪೋಸ್ಟ್‌ ಆ್ಯಂಡ್‌ ಟೆಲಿಗ್ರಾಫ್ ಕಚೇರಿಯಲ್ಲಿ ಕ್ಲರ್ಕ್‌ ಆಗಿ ಸೇವೆ. “ದೇಶಿರ್‌ ದಕ್‌ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕಾರ್ಯ, ಕೋಲ್ಕತ್ತಾದ ವಿದ್ಯಾಸಾಗರ ಕಾಲೇಜಿನಲ್ಲಿ ರಾಜಕೀಯ ವಿಜ್ಞಾನ ವಿಷಯದ ಉಪನ್ಯಾಸಕರಾಗಿ (ಸಹಾಯಕ ಪ್ರಾಧ್ಯಾಪಕ) ಸೇವೆ.
ಹವ್ಯಾಸ: ತೋಟಗಾರಿಕೆ, ಡೈರಿ ಬರೆಯುವುದು, ಸಂಗೀತ, ಸಾಹಿತ್ಯ
ಆಹಾರ ಅಭ್ಯಾಸ: ಶಾಖಾಹಾರಿ ಆಹಾರವನ್ನು ಇಷ್ಟಪಡುವ ಪ್ರಣಬ್‌, ಮಾಂಸಹಾರಿಯೂ ಹೌದು. ಬೆಂಗಾಲಿ ಶೈಲಿ ಪಾಯಸ, ಪತ್ನಿ ಕೈರುಚಿ ಇಷ್ಟಪಡುತ್ತಿದ್ದರು.
ವಿವಾಹ: 1957ರ ಜುಲೈ 13ರಂದು ಸುವ್ರಾ ಮುಖರ್ಜಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ. ಶರ್ಮಿಷ್ಟಾ ಮುಖರ್ಜಿ, ಅಭಿಜಿತ್‌ ಮುಖರ್ಜಿ ಹಾಗೂ ಇಂದ್ರಜಿತ್‌ ಮುಖರ್ಜಿ ಎಂಬ ಮೂವರು ಮಕ್ಕಳ ತುಂಬು ಕುಟುಂಬ.
1969: ಇಂದಿರಾ ಗಾಂಧಿ ಅವರ ವಿಶೇಷ ಚಿತ್ತದಿಂದ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಗೆ ಆಯ್ಕೆ.
1973: ಇಂದಿರಾ ಗಾಂಧಿ ಅವರ ಸಂಪುಟದಲ್ಲಿ ಸಚಿವ.
1975-77: ಅವಧಿಯ ಆಂತರಿಕ ತುರ್ತು ಪರಿಸ್ಥಿತಿ ವೇಳೆ ಆರೋಪಕ್ಕೆ ಗುರಿಯಾದವರಲ್ಲಿ ಇವರೂ ಒಬ್ಬರು.
1982-84: ಹಣಕಾಸು ಸಚಿವ, 1980ರಿಂದ 85ರ ವರೆಗೆ ರಾಜ್ಯಸಭೆಯ ನಾಯಕರಾಗಿಯೂ ಸೇವೆ.
1984: ಯೂರೋನಮಿ ಮ್ಯಾಗಜಿನ್‌ ಪ್ರಣವ್‌ ಮುಖರ್ಜಿಯನ್ನು ಜಗತ್ತಿನ ಅತ್ಯುತ್ತಮ ಹಣಕಾಸು ಸಚಿವ
1984: ಇಂದಿರಾ ಗಾಂಧಿ ಹತ್ಯೆ. ಕೈತಪ್ಪಿದ ಪ್ರಧಾನಿ ಪಟ್ಟ
1986-89: ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್‌ ಎಂಬ ಸ್ವಂತ ಪಕ್ಷದ ಸ್ಥಾಪನೆ.
1989: ರಾಜೀವ್‌ ಗಾಂಧಿ ಅವರ ಜತೆ ಸಂಧಾನ ಕಾಂಗ್ರೆಸ್‌ನೊಂದಿಗೆ ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್‌ ವಿಲಿನಗೊಳಿಸಿದರು.
1991: ರಾಜೀವ್‌ ಗಾಂಧಿ ಹತ್ಯೆ. ಬಳಿಕ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್‌ ಅವರಿಂದ ಅವರನ್ನು ಯೋಜನಾ ಆಯೋಗದ ಮುಖ್ಯಸ್ಥರಾಗಿ ಮುಖರ್ಜಿ ನೇಮಕ.
1995: ಪಿ.ವಿ. ನರಸಿಂಹರಾವ್‌ ಸರಕಾರದಲ್ಲಿ ವಿದೇಶಾಂಗ ಸಚಿವ, ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರಾಗಿ ಗುರುತಿಸಿಕೊಂಡ ಮುಖರ್ಜಿ.
1995: ಸೋನಿಯಾ ಗಾಂಧಿ ಅವರ ರಾಜಕೀಯ ಮಾರ್ಗದರ್ಶಕರಾಗಿ ನೇಮಕ. 1998ರಲ್ಲಿ ಸೋನಿಯಾ ಕಾಂಗ್ರೆಸ್‌ ಅಧ್ಯಕ್ಷರಾಗುವಲ್ಲಿ ಪ್ರಮುಖ ಪಾತ್ರ.
2004: ಕಾಂಗ್ರೆಸ್‌ ನೇತೃತ್ವದ ಯುನೈಟೆಡ್‌ ಪ್ರೊಗ್ರೇಸ್ಸಿವ್‌ ಅಲೈಯನ್ಸ್‌ (ಯುಪಿಎ) ಸರಕಾರ 2004ರಲ್ಲಿ ಮರಳಿ ಅಧಿಕಾರಕ್ಕೆ.
2004: ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ನಿಂತು ಗೆದ್ದು ಬಂದ ಮುಖರ್ಜಿ.
2012: 2004ರಿಂದ ಅವರು ರಾಜೀನಾಮೆ ನೀಡುವ ವರೆಗೂ (2012) ಪ್ರಧಾನಿ ಮನಮೋಹನ್‌ ಸಿಂಗ್‌ ಸರಕಾರದಲ್ಲಿ ಎರಡನೇ ವ್ಯಕ್ತಿಯಾಗಿಯೇ ಗುರುತಿಸಿಕೊಳ್ಳುತ್ತಾರೆ.
2004-06: ರಕ್ಷಣಾ ಖಾತೆ, 2006-09ರ ವರೆಗೆ ವಿದೇಶಾಂಗ ಖಾತೆ, 2009ರಿಂದ 2012ರ ವರೆಗೆ ಹಣಕಾಸು ಖಾತೆ ನಿರ್ವಹಣೆ.
2004-12: ಸರಕಾರದ ಹಲವು ಸಮಿತಿಗಳ ಮುಖ್ಯಸ್ಥರಾಗಿಯೂ ಮತ್ತು ಲೋಕಸಭಾ ನಾಯಕರಾಗಿಯೂ ಸೇವೆ.
2010: ವಿಶ್ವಬ್ಯಾಂಕ್‌ ಮತ್ತು ಐಎಂಎಫ್ ಪರಿಗಣಿಸುವ ಎಮರ್ಜಿಂಗ್‌ ಮಾರ್ಕೆಟ್ಸ್‌ ದಿನ ಪತ್ರಿಕೆ ನಡೆಸಿರುವ ಸಮೀಕ್ಷೆಯಲ್ಲಿ ಏಷ್ಯಾದಲ್ಲಿನ ವರ್ಷದ ಹಣಕಾಸು ಸಚಿವ ಪುರಸ್ಕಾರ.
2012: ಜುಲೈನಲ್ಲಿ ಯುಪಿಎ ಮೈತ್ರಿ ಕೂಟದಿಂದ ಮುಖರ್ಜಿ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ನಾಮನಿರ್ದೇಶನ. ಪ್ರತಿಸ್ಪರ್ಧಿ ಪಿ.ಎ.ಸಂಗ್ಮಾ ಅವರನ್ನು ಭಾರೀ ಮತಗಳ ಅಂತರದಲ್ಲಿ ಸೋಲಿಸಿ ಭಾರತದ ಮೊದಲ ಪ್ರಜೆಯಾಗಿ ಆಯ್ಕೆ.
2017: ಮುಖರ್ಜಿ ಅವರ ರಾಷ್ಟ್ರಪತಿ ಅವಧಿ ಮುಕ್ತಾಯವಾದ ಬಳಿಕ ಅವರು ಮತ್ತೆ ರಾಷ್ಟ್ರಪತಿ ಮರುಚುನಾವಣೆಯಲ್ಲಿ ಅಭ್ಯರ್ಥಿಯಾಗಲು ನಕಾರ.
2017: ವಯೋಸಹಜ ಆರೋಗ್ಯ ಸಮಸ್ಯೆಯ ಕಾರಣ ರಾಜಕೀಯದಿಂದ ನಿವೃತ್ತಿ.
2017: ಜುಲೈ 25ರಂದು ಅವರ ರಾಷ್ಟ್ರಪತಿ ಅವಧಿ ಮುಕ್ತಾಯ.
2018: ಜೂನ್‌ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಸಮಾರಂಭದಲ್ಲಿ ಭಾಗಿ.
2019: ಭಾರತದ ಅತ್ಯುನ್ನತ “ಭಾರತ ರತ್ನ’ ಪುರಸ್ಕಾರ

 

 

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next