Advertisement

ಹಜ್‌ ಯಾತ್ರೆ ರದ್ದು ಸಂಭವ ; ಸಿದ್ಧತೆಗೆ ಸಮಯದ ಅಭಾವ

02:07 AM Jun 18, 2020 | Hari Prasad |

ರಿಯಾದ್‌: ಇಸ್ಲಾಂ ಧರ್ಮೀಯರ ಪವಿತ್ರ ಧಾರ್ಮಿಕ ಪ್ರವಾಸವೆನಿಸಿರುವ ಹಜ್‌ ಯಾತ್ರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರದ್ದಾಗುವ ಸಾಧ್ಯತೆಯಿದೆ.

Advertisement

ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಉಂಟಾಗಿದ್ದ ಕಾರಣಕ್ಕಾಗಿ, ಹಜ್‌ ಯಾತ್ರೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುವ ಸಮಯ ಮೀರಿದೆ ಎಂದು ಈ ಸೌದಿ ಅರೇಬಿಯಾ ಸರಕಾರ ತಿಳಿಸಿದೆ.

ಲಾಕ್‌ಡೌನ್‌ ನಿಯಮಗಳು ಸಡಿಲಗೊಂಡಿ­ರುವ ಹಿನ್ನೆಲೆಯಲ್ಲಿ, ಜುಲೈ ಅಂತ್ಯಕ್ಕೆ ಸಾಮಾ­ನ್ಯವಾಗಿ ಜರುಗುವ ಯಾತ್ರೆಗೆ ಅವಕಾಶ ಕಲ್ಪಿಸುವ ಬಗ್ಗೆ ಮುಸ್ಲಿಂ ರಾಷ್ಟ್ರಗಳು ಸೌದಿಯ ಮೇಲೆ ಒತ್ತಡ ಹೇರಲಾರಂಭಿಸಿವೆ.

ಇದಕ್ಕೆ ಉತ್ತರಿಸಿರುವ ಸೌದಿಯ ಅಧಿಕಾರಿಯೊಬ್ಬರು, “ಯಾತ್ರೆ ವೇಳೆ ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ನಿಬಂಧನೆಗಳನ್ನು ಪಾಲಿಸುವುದು ಕಷ್ಟವಾಗಲಿದೆ. ಹಾಗಾಗಿ, ಯಾತ್ರೆ ನಡೆಸಬೇಕೇ, ಬೇಡವೇ ಎಂಬು­ದರ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಶೀಘ್ರವೇ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗು­ವುದು” ಎಂದು ತಿಳಿಸಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷದ ಮಾರ್ಚ್‌ ಅಂತ್ಯದಲ್ಲಿ ಹಜ್‌ ಯಾತ್ರೆಯ ಸಿದ್ಧತೆಗಳನ್ನು ಮುಂದೂಡುವಂತೆ ಮುಸ್ಲಿಂ ರಾಷ್ಟ್ರಗಳಿಗೆ ಸೌದಿ ಅರೇಬಿಯಾ ತಿಳಿಸಿದ್ದ ಕಾರಣ ಕಳೆದ ಬಾರಿಯಷ್ಟು ಯಾತ್ರಿಕರು ಈ ಬಾರಿಯ ಹಜ್‌ ಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇಲ್ಲ. ಇಂಡೋನೇಷ್ಯಾ, ಮಲೇಷ್ಯಾ, ಸೆನೆಗಲ್‌, ಸಿಂಗಾಪುರಗಳು ಹಜ್‌ ಯಾತ್ರೆಯಿಂದ ಹಿಂದಕ್ಕೆ ಸರಿಯುವುದಾಗಿ ಪ್ರಕಟಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next