Advertisement
ಈಗಾಗಲೇ ತೆಂಕು ತಿಟ್ಟು ಮತ್ತು ಬಡಗುತಿಟ್ಟಿನಲ್ಲಿ ಹಲವು ಮೇಳಗಳು ಕಾಲಮಿತಿ ಪ್ರದರ್ಶನಗಳಿಗೆ ಒಗ್ಗಿಕೊಂಡಿದ್ದು, ಯಶಸ್ವೀ ಪ್ರದರ್ಶನಗಳನ್ನೂ ನೀಡುತ್ತಿದ್ದಾರೆ. ಒಂದೊಂದು ಮೇಳದ ಲೆಕ್ಕಾಚಾರ ಒಂದೊಂದು ರೀತಿಯಲ್ಲಿ ಇದ್ದರೂ ಕಾಲಮಿತಿಯ ಪ್ರದರ್ಶನ ಕೆಲ ಮೇಳಗಳ ಮೇಲೆ, ಕಲೆಯ ಮೇಲೆ ಒಂದು ರೀತಿಯಲ್ಲಿ ಹೊಡೆತವಾಗುವ ಲಕ್ಷಣಗಳಿವೆ.
Related Articles
Advertisement
ಎಲ್ಲವೂ ಮರೆಯಾಗುವ ಆತಂಕಈಗಾಗಲೇ ಯಕ್ಷಗಾನದ ಒಂದೊಂದೇ ನೈಜತೆ ಕಳೆದುಕೊಂಡು ಹೊಸತನ ಮೇಳೈಸುತ್ತಿದ್ದು, ಕಾಲಮಿತಿ ಅನ್ನುವುದು ಅನೇಕ ಅಂಶಗಳು ಮರೆಯಾಗಲು ಕಾರಣವಾಗಬಹುದು. ಆಟಕ್ಕೆ ಅಬ್ರ ..ಎನ್ನುವ ಹಾಗೆ ಹಿಂದೆಲ್ಲ ಯಾವುದೇ ಸಂಪರ್ಕ ಸಾಧನಗಳು ಇಲ್ಲದ ಕಾಲದಲ್ಲಿ ಸಂಜೆ ಪ್ರದರ್ಶನವಾಗುವ ಸ್ಥಳದಲ್ಲಿ ಅಬ್ರ ಹಾಕುವ ಕ್ರಮವಿತ್ತು. ಅಬ್ರ ಅಂದರೆ ಚಂಡೆಯನ್ನು ಬಾರಿಸುವುದು, ಅದು ಬಹುದೂರ ಕೇಳಿ ಪ್ರದರ್ಶನಕ್ಕೆ ಜನ ಸೇರುತ್ತಿದ್ದರು. ಅದರ ಅಗತ್ಯ ಈಗಿನ ಕಾಲದಲ್ಲಿ ಅಗತ್ಯವಿಲ್ಲ ಅನಿಸುತ್ತದೆ. ಬಾಲ ಕಲಾವಿದರಿಗೆ ಪಾಠವಾಗುವ ಕೋಡಂಗಿ ವೇಷಗಳೂ ಈಗ ಮರೆಯಾಗಿದೆ.ಅದಕ್ಕಾಗಿ ಬಾಲ ಕಲಾವಿದರ ಲಭ್ಯತೆಯೂ ಇಲ್ಲ. ಬಲಗೋಪಾಲ, ಪೀಠಿಕಾ ಸ್ತ್ರೀವೇಷ, ಒಡ್ಡೋಲಗಗಳೂ ಪೂರ್ಣವಾಗಿ ಮರೆಯಾಗುವ ಆತಂಕವಿದೆ. ಶ್ರೀ ಕ್ಷೇತ್ರ ಮಂದಾರ್ತಿ ಮೇಳಗಳ ಮಳೆಗಾಲದ ಹರಕೆ ಸೇವೆಗಳು ಈಗಾಗಲೇ ಕಾಲಮಿತಿಯಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಅಲ್ಲಿ ಪ್ರತಿ ನಿತ್ಯವೂ ಬಾಲಗೋಪಾಲ, ಪೀಠಿಕಾ ಸ್ತ್ರೀ ವೇಷ ಮತ್ತು ಒಡ್ಡೋಲಗಗಳನ್ನೂ ಪ್ರತಿ ನಿತ್ಯವೂ ಮಾಡುತ್ತಿರುವುದು ಪ್ರಶಂಸನೀಯ. ಹರಕೆ ಮೇಳಗಳು ಪೂರ್ಣ ರಾತ್ರಿ ಪ್ರದರ್ಶನಗಳನ್ನು ನೀಡಬೇಕು ಎನ್ನುವುದು ಸಂಪ್ರದಾಯವಾದಿ ಪ್ರೇಕ್ಷಕರ ಅಭಿಪ್ರಾಯವಾದರೂ ಕಾಲಕ್ಕೆ ತಕ್ಕ ಹಾಗೆ ಬದಲಾಗಬೇಕಾದ ಅನಿವಾರ್ಯತೆಯನ್ನೂ ತಳ್ಳಿ ಹಾಕುವ ಹಾಗಿಲ್ಲ. ಈಗಾಗಲೇ ಕಾಲಮಿತಿಯ ಆಟಗಳಿಂದ ಯಕ್ಷಗಾನದತ್ತ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯಬಹುದು ಎಂದೂ ಸಾಬೀತಾಗಿದೆ. ಎಲ್ಲ ಮೇಳಗಳ ಯಜಮಾನರು, ಬಯಲಾಟದ ಸಂಘಟಕರು ಹಾಗೂ ಕಲಾಭಿ ಮಾನಿಗಳು ಕಾಲಮಿತಿಗೆ ಹೊಂದಿ ಕೊಳ್ಳುವ ಅನಿವಾರ್ಯತೆ ಇದ್ದರೂ ಹಲವು ಯಕ್ಷಾಭಿಮಾನಿಗಳಲ್ಲಿ, ಕಲೆಯನ್ನೇ ನಂಬಿಕೊಂಡು ಸೇವೆ ಮಾಡುತ್ತಿರುವ ಕಲಾವಿದರಲ್ಲಿ ಪೂರ್ಣ ರಾತ್ರಿಯ ಆಟ ಉಳಿಯಬೇಕು ಅನ್ನುವ ಅಭಿಪ್ರಾಯವಿದೆ. ಒಟ್ಟಾರೆಯಾಗಿ ಕಾಲಮಿತಿ ಪ್ರದರ್ಶನಗಳಿಗೆ ಹಲವು ಕಲಾವಿದರು ವಿರೋಧ ವ್ಯಕ್ತಪಡಿಸಿದ್ದಾರೆ. ಅರ್ಧ ರಾತ್ರಿಯಲ್ಲಿ ಆಟ ಮುಗಿಸಿ ಕಲಾವಿದ ವಾಹನವನ್ನೇರಿ ಮನೆಗೆ ತೆರಳುವುದೂ ಅಪಾಯಕಾರಿ, ಹಲವು ಕಲಾವಿದರು ಅಪಘಾತಕ್ಕೆ ಗುರಿಯಾದ ನಿದರ್ಶನಗಳೂ ಇವೆ. ಸಾಮಾನ್ಯವಾಗಿ ಐದು ಮೇಳಗಳು, ಎರಡು ಪ್ರತ್ಯೇಕ ಮೇಳಗಳ ಕೂಡಾಟಗಳು ನಡೆದಾಗ ಕಾಲಮಿತಿ ಅನ್ನುವುದು ಅಷ್ಟೊಂದು ಸಮಂಜಸವಲ್ಲ ಅನ್ನುತ್ತಾರೆ ಯಕ್ಷಗಾನ ಸಂಘಟಕರು. ಪೂರ್ಣ ರಾತ್ರಿಯ ಆಟಗಳಿಂದ ಮಾತ್ರ ಪ್ರದರ್ಶನಗಳಿಗೆ ಮತ್ತು ಪ್ರಸಂಗಗಳಿಗೆ ನ್ಯಾಯ ಒದಗಿಸಬಹುದು ಎನ್ನುತ್ತಾರೆ. ವಿಷ್ಣುದಾಸ್ ಪಾಟೀಲ್