Advertisement

ಹುಬ್ಬಳ್ಳಿ: ಗಣೇಶ ವಿಗ್ರಹದ ಹಿಂದೆ ಹಾಕಲಾಗಿದ್ದ ತಿಲಕ್- ಸಾವರ್ಕರ್ ಫೋಟೊ ತೆರವು; ಆಕ್ರೋಶ

03:13 PM Sep 01, 2022 | Team Udayavani |

ಹುಬ್ಬಳ್ಳಿ: ಗಣೇಶ ವಿಗ್ರಹ ಪ್ರತಿಷ್ಠಾನ ಮಾಡಿದ ವೇದಿಕೆಯ ಹಿಂದೆ ಹಾಕಲಾಗಿದ್ದ ಬಾಲಗಂಗಾಧರ ತಿಲಕ್ ಮತ್ತು ವೀರ ಸಾವರ್ಕರ್ ಅವರ ಭಾವಚಿತ್ರವಿದ್ದ ಬ್ಯಾನರನ್ನು ಬುಧವಾರ ತಡರಾತ್ರಿ ಆಯೋಜಕರು ತೆರವು ಮಾಡಿದ್ದಾರೆ.

Advertisement

ಮಹಾನಗರ ಪಾಲಿಕೆಯಿಂದ ವಿಧಿಸಲಾದ ನಿಬಂಧನೆಗಳು ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿಯವರು ಈ ಬ್ಯಾನರ್ ತೆರವು ಮಾಡಿದ್ದಾರೆ. ಮೈದಾನದ ಹೊರಭಾಗದಲ್ಲಿ ವೀರ ಸಾವರ್ಕರ್ ಅವರ ಭಾವಚಿತ್ರ ಹಾಕಲಾಗಿದೆ.

ವೇದಿಕೆಯಲ್ಲಿದ್ದ ಸಾವರ್ಕರ್ ಭಾವಚಿತ್ರವಿದ್ದ ಬ್ಯಾನರ್ ತೆಗೆದಿದ್ದಕ್ಕೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಸಾವರ್ಕರ್ ಪರವಾಗಿ ಜಯಘೋಷ ಮೊಳಗಿಸಿದರು.

ಇದನ್ನೂ ಓದಿ:ಪಾಲಕರ ಕನಸು ನನಸಾಗಿಸುವ ಎಸ್‌ಕೆಆರ್‌ ಪದವಿ ಪೂರ್ವ ಕಾಲೇಜು

ಗುರುವಾರ ಬೆಳಗ್ಗೆ ಗಣೇಶನಿಗೆ ಗಣಹೋಮ, ಪ್ರಸಾದ ವಿತರಣೆ ಮಾಡಲಾಯಿತು. ವಿವಿಧ ಹಿಂದೂಪರ ಸಂಘಟನೆಯವರು, ಗಜಾನನ ಮಂಡಳಿಯವರು ಆಗಮಿಸಿ ಪೂಜೆ ಸಲ್ಲಿಸಿ ಗಣೇಶನ ಪರ ಘೋಷಣೆಗಳನ್ನು ಕೂಗಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next