Advertisement
ತಿಲಕ್ ನಗರ ಪೆಸ್ತಮ್ ಸಾಗರ್ ಕರ್ನಾಟಕ ಸಂಘ ಇದರ 12 ನೇ ವಾರ್ಷಿಕ ಮಹಾಸಭೆಯು ತಿಲಕ್ ನಗರದ ಆಮಿc ಶಾಲಾ ಮತ್ತು ಸಹಕಾರ್ ಸಿನೆಮಾ ಹತ್ತಿರದ ರಘುವಂಶಿ ಸಭಾಗೃಹದಲ್ಲಿ ಜರಗಿದ್ದು, ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
Advertisement
ನಿಕಟಪೂರ್ವ ಅಧ್ಯಕ್ಷ ಉದ್ಯಮಿ ಸತೀಶ್ ಶೆಟ್ಟಿ ಇವರು ಮಾತನಾಡಿ, ನಾವೆಲ್ಲರು ಒಂದು ಕುಟುಂಬವಿದ್ದಂತೆ. ಸದಸ್ಯ ಬಾಂಧವರ ಸುಖ- ದುಃಖಗಳಲ್ಲಿ ನಾವೆಲ್ಲರು ಒಗ್ಗಟ್ಟಿನಿಂದ ಪಾಲ್ಗೊಳ್ಳಬೇಕು. ಪ್ರೀತಿ, ವಿಶ್ವಾಸದಿಂದ ಕೈಗೊಂಡ ಯೋಜನೆಯ ಯಶಸ್ಸಿಗೆ ಮುಂದಾಗೋಣ. ಅಲ್ಲದೆ ನೂತನ ಕಚೇರಿಗಾಗಿ ತಾನು 1 ಲಕ್ಷ ರೂ. ಗಳನ್ನು ನೀಡುತ್ತಿದ್ದೇನೆ. ಎಲ್ಲರು ಸೇರಿ ಆದಷ್ಟು ಬೇಗ ಸ್ವಂತ ಕಚೇರಿ ಸ್ಥಾಪಿಸೋಣ ಎಂದರು.
ರಾಧಾ ಭಂಡಾರಿ, ಸುಗಂಧಿ ಶೆಟ್ಟಿ, ಜಯಂತಿ ಆರ್. ಮೊಲಿ, ಹೀಮಾ ಸಂಪತ್ ಶೆಟ್ಟಿ, ಅನಿತಾ ಶೆಟ್ಟಿ, ಶಿಲ್ಪಾ ಶರತ್ ಶೆಟ್ಟಿ, ದಯಾನಂದ ಎಂ. ದೇವಾಡಿಗ, ಅಮರೇಶ್ ಶೆಟ್ಟಿ, ಜಯಂತಿ ಎಂ. ದೇವಾಡಿಗ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಮಾಲತಿ ಜೆ. ಮೊಲಿ, ಕೋಶಾಧಿಕಾರಿ ಸಂಗೀತಾ ಸಿ. ಶೆಟ್ಟಿ ಅವರು ನೂತನ ಕಚೇರಿ ಸ್ಥಾಪನೆಗೆ ತಲಾ 50 ಸಾವಿರ ರೂ. ಗಳಿಗಿಂತ ಅಧಿಕ ದೇಣಿಗೆ ನೀಡುವುದಾಗಿ ಘೋಷಿಸಿದರು.ಸಂಸ್ಥಾಪಕಾಧ್ಯಕ್ಷ ಶೇಖರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ನಾಗವೇಣಿ ಶ್ರೀಧರ ಶೆಟ್ಟಿ, ಶಾಲಿನಿ ಶೆಟ್ಟಿ, ಜಯಂತಿ ಮೊಲಿ, ಜಯಂತಿ ದೇವಾಡಿಗ, ಗುಣಕರ ಹೆಗ್ಡೆ, ದಯಾನಂದ ದೇವಾಡಿಗ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕೌಡೂರು ಸುಶೀರ್ ಶೆಟ್ಟಿ, ವೈದ್ಯಕೀಯ ವಿಭಾಗದ ಕಾರ್ಯಾಧ್ಯಕ್ಷ ಸುಧಾಕರ ಸಫಲಿಗ, ಸಂಘದ ಉಪಾಧ್ಯಕ್ಷ ಚಂದ್ರಹಾಸ್ ಎನ್. ಶೆಟ್ಟಿ ಅವರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು.
ಸೇನೆಯಿಂದ ನಿವೃತ್ತಗೊಂಡ ಸಂಪತ್ ಶೆಟ್ಟಿ ದಂಪತಿಯನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು. ಗೌರವ ಕಾರ್ಯದರ್ಶಿ ಟಿ. ಆರ್. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಜತೆ ಕಾರ್ಯದರ್ಶಿ ಸಂಪತ್ ಶೆಟ್ಟಿ ವಂದಿಸಿದರು. ಸುದೇಶ್ ಶೆಟ್ಟಿ ಪ್ರಾರ್ಥನೆಗೈದರು. ಸಂಪತ್ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಂಘವು ಎಲ್ಲ ಸಮಾಜದ ಹಾಗೂ ಇನ್ನಿತರರೊಂದಿಗೆ ಸಹಬಾಳ್ವೆಯನ್ನು ಹೊಂದಿದ್ದು, ನಮ್ಮ ಸ್ವಂತ ಕಚೇರಿಯ ಜವಾಬ್ದಾರಿಯನ್ನು ನನ್ನ ಹೆಗಲ ಮೇಲೆ ಹಾಕಿದ್ದೀರಿ. ಖಂಡಿತವಾಗಿಯೂ ನಾನು ಹಿಂದೆ ನೋಡದೆ, ದಿಟ್ಟತನದಿಂದ ಯೋಜನೆಯ ಸಫಲತೆಗೆ ಮುಂದಾಗುತ್ತೇನೆ. ನಾವೆಲ್ಲರೂ ಒಮ್ಮತದಿಂದ ಸ್ವಂತ ಕಚೇರಿಯ ಬಗ್ಗೆ ಕಾರ್ಯನಿರ್ವಹಿಸಬೇಕು. ನಮ್ಮ 13ನೇ ವಾರ್ಷಿಕೋತ್ಸವವನ್ನು 2019 ನೇ, ಫೆ. 23ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಆಯೋಜಿಸಲಾಗಿದೆ. ಅದಕ್ಕಿಂತ ಮೊದಲು ನಮ್ಮ ಯೋಜನೆ ಕೈಗೂಡಬೇಕು. ಎಲ್ಲರೂ ಸಹಾಯ, ಸಹಕಾರ ನೀಡಿ ಯೋಜನೆಯ ಕನಸನ್ನು ನನಸಾಗಿಸಬೇಕು
– ಜಯ ಎ. ಶೆಟ್ಟಿ (ಕಾರ್ಯಾಧ್ಯಕ್ಷರು, ಕಟ್ಟಡ ಸಮಿತಿ ಪೆಸ್ತಮ್ ಸಾಗರ್ ಕರ್ನಾಟಕ ಸಂಘ ತಿಲಕ್‌ನಗರ).