Advertisement

ಟಿಕಾಯತ್‌ ಆಸ್ತಿಮೌಲ್ಯ 80 ಕೋಟಿ ರೂ.!

01:19 AM Feb 13, 2021 | Team Udayavani |

ಹೊಸದಿಲ್ಲಿ: ರೈತ ಹೋರಾಟಗಾರ, ಭಾರತೀಯ ಕಿಸಾನ್‌ ಯೂನಿಯನ್‌ (ಬಿಕೆಯು) ನಾಯಕ ರಾಕೇಶ್‌ ಟಿಕಾಯತ್‌ 80 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಈ ಬಗ್ಗೆ “ಡಿಎನ್‌ಎ’ ಪತ್ರಿಕೆ ವರದಿ ಮಾಡಿದೆ.

Advertisement

ಅದರ ಪ್ರಕಾರ ಉತ್ತರಪ್ರದೇಶ, ಉತ್ತರಾಖಂಡ, ದಿಲ್ಲಿ, ಮಹಾರಾಷ್ಟ್ರಗಳ 13 ನಗರಗಳಲ್ಲಿ ಆಸ್ತಿ ಹೊಂದಿದ್ದಾರೆ. ಒಂದು ಕಾಲದಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿದ್ದ ಅವರೀಗ ಕೃಷಿ ಹೋರಾಟಗಳ ನೇತಾರ. ವಿಚಿತ್ರವೆಂದರೆ ಟಿಕಾಯತ್‌ಗೆ ಹೋರಾಟವೇ ಮೊದಲ ಕೆಲಸ ಹೊರತು, ಕೃಷಿಯಲ್ಲ! ಅವರು ಭೂಮಿ, ಪೆಟ್ರೋಲ್‌ ಪಂಪುಗಳು, ಶೋರೂಮ್‌ಗಳು, ಇಟ್ಟಿಗೆ ಗೂಡು ಇತ್ಯಾದಿ ಉದ್ಯಮಗಳಲ್ಲಿ ತೊಡಗಿ ಕೊಂಡಿದ್ದಾರೆ. ಅಲ್ಲದೆ, ಕಾನೂನು ಬಾಹಿರ ವಾಗಿ ಜಿಂಕೆಯೊಂದನ್ನು ಸಾಕಿಕೊಂಡಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.

ಇದೇ ವೇಳೆ ಫೆ.14ರಂದು ಹರಿಯಾಣ, ಮಹಾರಾಷ್ಟ್ರ, ರಾಜಸ್ಥಾನಗಳಲ್ಲಿ ಆಯೋಜಿಸಲಾ ಗಿರುವ 7 “ಮಹಾ ಪಂಚಾಯತ್‌’ ಕಾರ್ಯಕ್ರಮ ಗಳಲ್ಲಿ ಟಿಕಾಯತ್‌ ಭಾಗವಹಿಸಲಿದ್ದಾರೆ. ಇದೇ ವೇಳೆ ರಾಜಸ್ಥಾನದ ಶ್ರೀ ಗಂಗಾನಗರ ಮತ್ತು ಹನುಮಾನ್‌ಗಡದಲ್ಲಿ ಆಯೋಜಿಸಲಾಗಿದ್ದ ಕಿಸಾನ್‌ ಪಂಚಾಯತ್‌ನಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಭಾಗವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next