Advertisement

ನಿರ್ಭಯಾ ಹಂತಕ ಅಕ್ಷಯ್ ಸಿಂಗ್ ಕುಟುಂಬಕ್ಕೆ ಅಂತಿಮ ಕ್ಷಣದ ಭೇಟಿ ನಿರಾಕರಣೆ

10:03 AM Mar 21, 2020 | Hari Prasad |

ನವದೆಹಲಿ: ನಿರ್ಭಯಾ ಹಂತಕರನ್ನು ಗಲ್ಲಿಗೇರಿಸುವ ದಿನದ ರಾತ್ರಿ ಸುಪ್ರೀಂ ಕೋರ್ಟ್ ನಲ್ಲಿ ಹೈಡ್ರಾಮಾ ನಡೆಯಿತು. ಅಪರಾಧಿಗಳ ಪರ ವಕೀಲರಾದ ಎ.ಪಿ.ಸಿಂಗ್ ಅವರು ಗುರುವಾರ ತಡರಾತ್ರಿ ಸುಪ್ರೀಂ ಕೋರ್ಟ್ ಗೆ ಮನವಿ ಅರ್ಜಿಯೊಂದನ್ನು ಸಲ್ಲಿಸುತ್ತಾರೆ.ರಾಷ್ಟ್ರಪತಿಗಳು ಪವನ್ ಗುಪ್ತಾನ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ಈ ಅರ್ಜಿ ಸಲ್ಲಿಕೆಯಾಗುತ್ತದೆ.

Advertisement

ತಡರಾತ್ರಿ 2.30 ಗಂಟೆಗೆ ಈ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಭಾನುಮತಿ ಅವರಿದ್ದ ತ್ರಿಸದಸ್ಯ ಪೀಠ ಪವನ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸುತ್ತದೆ ಹಾಗೂ ಈ ಅರ್ಜಿಯಲ್ಲಿ ಯಾವುದೇ ಹೊಸ ವಿಚಾರಗಳಲಿಲ್ಲ ಎಂದು ಅಪರಾಧಿಗಳ ಪರ ವಕೀಲರನ್ನು ತರಾಟೆಗೆ ತೆಗೆದುಕೊಳ್ಳುತ್ತದೆ.

ಇದಾದ ಬಳಿಕ ಅಪರಾಧಿಗಳ ಪರ ವಕೀಲರು ನ್ಯಾಯಾಲಯದ ಮುಂದೆ ಹೊಸ ಕೋರಿಕೆಯೊಂದನ್ನು ಇಡುತ್ತಾರೆ. ನೇಣಿಗೇರುವ ಕೊನೇ ಕ್ಷಣದಲ್ಲಿ ಅಪರಾಧಿಗಳಲ್ಲಿ ಒಬ್ಬನಾಗಿರುವ ಅಕ್ಷಯ್ ಸಿಂಗ್ ಗೆ ಆತನ ಕುಟುಂಬವನ್ನು ಭೇಟಿ ಮಾಡುವ ಅವಕಾಶವನ್ನು ಮಾಡಿಕೊಡಬೇಕೆಂಬ ಬೇಡಿಕೆಯನ್ನು ಅಪರಾಧಿಗಳ ಪರ ವಕೀಲರಾಗಿರುವ ಎ.ಪಿ.ಸಿಂಗ್ ಅವರು ಇಡುತ್ತಾರೆ.

ಇದಕ್ಕೆ ಭಾರತ ಸರಕಾರದ ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಅವರೂ ಸಹಮತವನ್ನು ವ್ಯಕ್ತಪಡಿಸಿ 10 ನಿಮಿಷಗಳ ಕಾಲ ಅಕ್ಷಯ್ ಸಿಂಗ್ ಕುಟುಂಬ ಸದಸ್ಯರಿಗೆ ಆತನನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡುವಂತೆ ತಿಹಾರ್ ಜೈಲು ಅಧಿಕಾರಿಗಳನ್ನು ವಿನಂತಿಸಿಕೊಳ್ಳುತ್ತಾರೆ.

ಆದರೆ ಇದಕ್ಕೆ ಒಪ್ಪದ ತಿಹಾರ್ ಜೈಲು ಅಧಿಕಾರಿಗಳು, ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿಯೊಬ್ಬನನ್ನು ಆತ ನೇಣಿಗೇರುವ ಅಂತಿಮ ಕ್ಷಣದಲ್ಲಿ ಕುಟುಂಬ ಸದಸ್ಯರ ಭೇಟಿಗೆ ಅವಕಾಶ ಮಾಡಿಕೊಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೇಳಿ ವಕೀಲರ ಮನವಿಯನ್ನು ತಿರಸ್ಕರಿಸುತ್ತಾರೆ.

Advertisement

ಅಕ್ಷಯ್ ಕುಮಾರ್ ಸಿಂಗ್ ಮಡದಿ ತನ್ನ ಪತಿಯಿಂದ ವಿಚ್ಛೇದನ ಕೋರಿ ಬಿಹಾರದ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next