Advertisement

ಸಹದೋಲ್‌ ಸಮೀಪ ಅರಣ್ಯದಲ್ಲಿ ಹೆಣ್ಣು ಹುಲಿ ಶವ ಪತ್ತೆ

07:10 PM Nov 25, 2017 | Team Udayavani |

ಸಹದೋಲ್‌, ಮಧ್ಯ ಪ್ರದೇಶ : ಪ್ರಾಯಕ್ಕೆ ಬಂದ ಹೆಣ್ಣು ಹುಲಿಯೊಂದು ಸಹದೋಲ್‌ ಜಿಲ್ಲಾ ಕೇಂದ್ರದಿಂದ ಸುಮಾರು ಎಂಟು ಕಿ.ಮೀ. ದೂರದಲ್ಲಿರುವ ಕಲ್ಯಾಣಪುರ ಗ್ರಾಮ ಸಮೀಪದ ಅರಣ್ಯದಲ್ಲಿ ಸತ್ತು ಬಿದ್ದಿರುವುದು ಪತ್ತೆಯಾಗಿದೆ. 

Advertisement

“ನಮಗೆ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಕಲ್ಯಾಣಪುರಕ್ಕೆ ಸಮೀಪದ ಅರಣ್ಯದಲ್ಲಿ ಹುಲಿ ಸತ್ತು ಬಿದ್ದಿರುವ ಮಾಹಿತಿ ಲಭಿಸಿತು. ನೋಡಿದಾಗ ಹುಲಿಯು ಎರಡು ಅಥವಾ ಮೂರು ದಿನಗಳ ಮೊದಲೇ ಸತ್ತಿರುವುದಾಗಿ ಗೊತ್ತಾಯಿತು” ಎಂದು ಸಹದೋಲ್‌ ವಿಭಾಗೀಯ ಅರಣ್ಯಾಧಿಕಾರಿ ಪ್ರದೀಪ್‌ ಮಿಶ್ರಾ ಮಾಧ್ಯಮಕ್ಕೆ ತಿಳಿಸಿದರು. 

‘ಹುಲಿಯ ಹೊರ ಮೈಯಲ್ಲಿ ಯಾವುದೇ ಗಾಯಗಳು ಕಂಡು ಬಂದಿಲ್ಲ. ಅಟಾಪ್ಸಿ ನಡೆಸಿದ ಬಳಿಕವಷ್ಟೇ ಹುಲಿಯ ಸಾವಿನ ಕಾರಣ ಗೊತ್ತಾದೀತು’ ಎಂದವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next