Advertisement

ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಭದ್ರತೆ

05:11 PM Apr 17, 2020 | Suhan S |

ನರಗುಂದ: ಬಾಗಲಕೋಟಿ-ಗದಗ ಜಿಲ್ಲೆಗಳ ಗಡಿಭಾಗ ಮತ್ತು ಹುಬ್ಬಳ್ಳಿ ಕಡೆಗೆ ಗದಗ-ಧಾರವಾಡ ಗಡಿಭಾಗದ ಚೆಕ್‌ಪೋಸ್ಟ್‌ಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಅಗತ್ಯ ಸೇವೆಗಳ ವಾಹನ ಹೊರತುಪಡಿಸಿ ಉಳಿದೆಲ್ಲ ವಾಹನಗಳ ಸಂಚಾರ ಮೊಟಕುಗೊಳಿಸಲು ಸೂಚಿಸಲಾಗಿದೆ ಎಂದು ಡಿಸಿ ಎಂ.ಜಿ.ಹಿರೇಮಠ ಹೇಳಿದರು.

Advertisement

ಗುರುವಾರ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಿಲ್ಲೆ ಗಡಿಗ್ರಾಮ ಕೊಣ್ಣೂರ ಮತ್ತು ಕಲಕೇರಿ ಗ್ರಾಮದ ಹೊರವಲಯ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಕಟ್ಟುನಿಟ್ಟಿನ ಸೂಚನೆ ನೀಡಿದ ಬಳಿಕ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆ.7ರಿಂದ ರಾತ್ರಿ 10ಗಂಟೆವರೆಗೂ ಚೆಕ್‌ಪೋಸ್ಟ್‌ನಲ್ಲಿ ಬಿಗಿ ಕಣ್ಗಾವಲಿಗೆ ಸೂಚಿಸಲಾಗಿದೆ ಎಂದರು.

ನೆರೆಪೀಡಿತ ಪ್ರದೇಶ ಎಂದು ಘೋಷಿಸಲಾದ ಮಲಪ್ರಭಾ ನದಿ ಭಾಗದ ಕೊಣ್ಣೂರ ಗ್ರಾಮದ ಎಪಿಎಂಸಿ ಪ್ರಾಂಗಣಕ್ಕೆ ಭೇಟಿ ನೀಡಿ ತಾತ್ಕಾಲಿಕ ಶೆಡ್‌ನ‌ಲ್ಲಿ ವಾಸಿಸುತ್ತಿರುವ ಸಂತ್ರಸ್ತರ ಮೊರೆ ಆಲಿಸಲಾಗಿದೆ. ಮನೆ ಕಳೆದುಕೊಂಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಳ್ಳಲು ಈಗಾಗಲೇ ಮಂಜೂರಾತಿ ನೀಡಿದ್ದು, ಎ ಮತ್ತು ಬಿ ಕೆಟೆಗೇರಿಯಲ್ಲಿ ಒಟ್ಟು 985 ಮನೆ ನಿರ್ಮಿಸಿಕೊಳ್ಳುತ್ತಿದ್ದು, 635 ಬುನಾದಿ, 189 ಸ್ಲ್ಯಾಬ್‌ ಹಂತದಲ್ಲಿದ್ದು, ಒಟ್ಟು 800 ಮನೆಗಳ ನಿರ್ಮಾಣ ಒಂದೊಂದು ಹಂತದಲ್ಲಿದೆ. ಮನೆ ನಿರ್ಮಾಣ ಕಾರ್ಯವನ್ನು ಎ.20ರಿಂದ ಪುನಃ ಪ್ರಾರಂಭಿಸುವಂತೆ ಸಂತ್ರಸ್ತರಿಗೆ ಸೂಚಿಸಲಾಯಿತು. ಜಿಲ್ಲೆಯಲ್ಲಿ 281 ಶಾಲೆಗಳ ದುರಸ್ತಿಗೆ ಅನುದಾನ ಬಿಡುಗಡೆಯಾಗಿದೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಎನ್‌.ಯತೀಶ್‌, ಡಿವೈಎಸ್‌ಪಿ ಶಿವಾನಂದ ಕಟಗಿ, ಸಿಪಿಐ ಡಿ.ಬಿ. ಪಾಟೀಲ, ತಹಶೀಲ್ದಾರ್‌ ಎ.ಎಚ್‌.ಮಹೇಂದ್ರ, ತಾಪಂ ಅಧ್ಯಕ್ಷ ವಿಠ್ಠಲ ತಿಮ್ಮರಡ್ಡಿ, ಸದಸ್ಯ ಪ್ರಭುಲಿಂಗಪ್ಪ ಯಲಿಗಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next