Advertisement

ಅನಗತ್ಯ ತಿರುಗಾಟಕ್ಕೆ ಬ್ರೇಕ್: ವಿಟ್ಲ ಪೇಟೆಯಲ್ಲಿ ಪೊಲೀಸರಿಂದ ಬಿಗಿ ನಾಕಾಬಂದಿ

04:09 PM May 05, 2021 | Team Udayavani |

ವಿಟ್ಲ: ವಿಟ್ಲ ಪೇಟೆಗೆ ಅನಗತ್ಯವಾಗಿ ಬರುವವರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೇಟೆಯ ಜಂಕ್ಷನ್ ನ ನಾಲ್ಕು ರಸ್ತೆಯಲ್ಲಿ ವಿಟ್ಲ ಪೊಲೀಸರು ನಾಕಾಬಂದಿ ಮಾಡುತ್ತಿದ್ದಾರೆ.

Advertisement

ಕೊವಿಡ್ 19 ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಲಾಕ್ ಡೌನ್ ಹೇರಿದ್ದರೂ ನಾಗರಿಕರು ಅಗತ್ಯ ವಸ್ತುಗಳ ಹೆಸರಿನಲ್ಲಿ ನಿತ್ಯ ಪೇಟೆಗೆ ಆಗಮಿಸುತ್ತಿದ್ದಾರೆ. ಸಾಕಷ್ಟು ಎಚ್ಚರಿಕೆಗಳನ್ನು ನೀಡಿದರೂ ನಿರ್ಲಕ್ಷಿಸುತ್ತಿದ್ದಾರೆ. ಪಟ್ಟಣ ಪಂಚಾಯತ್ ದಂಡ ವಿಧಿಸಿದರೂ ಕೇರ್ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ:ಸರ್ಕಾರಿ ಆಸ್ಪತ್ರೆ ಕಟ್ಟಡದಿಂದ ಜಿಗಿದು ಕೋವಿಡ್ ಸೋಂಕಿತ ಆತ್ಮಹತ್ಯೆ

ಪುತ್ತೂರು ರಸ್ತೆಯ ಮೇಗಿನಪೇಟೆಯಲ್ಲಿ, ಕಾಸರಗೋಡು ರಸ್ತೆಯ ಸರ್ಕಾರಿ ಬಸ್ ನಿಲ್ದಾಣದ ಬಳಿ, ಮಂಗಳೂರು ರಸ್ತೆಯ ಬೊಬ್ಬೆಕೇರಿಯಲ್ಲಿ, ಸಾಲೆತ್ತೂರು ರಸ್ತೆಯ ನಾಡಕಚೇರಿ ಬಳಿಯಲ್ಲಿ ನಾಕಾಬಂದಿಯನ್ನು ಹಾಕಲಿದೆ.

ಸಮೀಪದಲ್ಲಿ ಅಗತ್ಯ ವಸ್ತುಗಳು ಸಿಗದೆ ವಿಟ್ಲದಲ್ಲಿ ಮಾತ್ರ ಸಿಗಲಿದೆ ಎಂಬ ವಸ್ತುಗಳಿಗೆ ಬಂದ ಜನರು ಆಧಾರ್ ಕಾರ್ಡ್ ತೋರಿಸಿದಲ್ಲಿ ಅವರಿಗೆ ಪೇಟೆಗೆ ಪ್ರವೇಶ ಸಿಗಲಿದೆ. ಸಮೀಪದಲ್ಲಿ ಸಾಮಗ್ರಿಗಳು ಇದ್ದೂ ಪೇಟೆಗೆ ಅನಗತ್ಯವಾಗಿ ಆಗಮಿಸುವವರ ವಾಹನಗಳನ್ನು ವಶಕ್ಕೆ ಪಡೆಯುವ ಜತೆಗೆ ಕಾನೂನು ಕ್ರಮ ಜರಗಿಸುವ ಬಗ್ಗೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next