ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಅಧಿಕಾರಿಗಳ ಬೇಜಾವಾಬ್ದಾರಿತನ ಮುಂದುವರಿದಿರುವುದಕ್ಕೆ ಸಾಕ್ಷಿಯಾಗಿ ಹುಲಿಗಳ ದಾಳಿಗೆ ಪ್ರಾಣಿಪಾಲಕನೊಬ್ಬ ಬಲಿಯಾದ ದಾರುಣ ಘಟನೆ ಶನಿವಾರ ಸಂಜೆ ನಡೆದಿದೆ.
7 ದಿನಗಳ ಹಿಂದಷ್ಟೆ ಸಹಾಯಕ ಪ್ರಾಣಿ ಪಾಲಕನಾಗಿ ಕೆಲಸಕ್ಕೆ ಸೇರಿದ್ದ 35 ವರ್ಷದ ಆಂಜನೇಯ ಹುಲಿಗಳ ದಾಳಿಗೆ ಬಲಿಯಾದ ವ್ಯಕ್ತಿ.
ಸಂಜೆ ಹುಲಿಗಳಿಗೆ ಆಹಾರ ನೀಡಲು ತೆರಳಿದ್ದ ವೇಳೆ 1 ವರ್ಷ ಪ್ರಾಯದ 2 ಮರಿ ಹುಲಿಗಳು ಮೈಮೇಲೆ ಎರಗಿವೆ. ಈ ವೇಳೆ ದೊಡ್ಡ ಹುಲಿಗಳು ದಾಳಿ ಮಾಡಿದ್ದು ,ತೀವ್ರ ರಕ್ತಸ್ರಾವದಿಂದ ಆಂಜನೇಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ನಡೆದ ಬಳಿಕ ಮಾಧ್ಯಮಗಳು ಒಳ ಪ್ರವೇಶಿಸದಂತೆ ಗೇಟ್‌ಗೆ ಬೀಗ ಹಾಕಲಾಗಿತ್ತು.
ಬನ್ನೇರು ಘಟ್ಟ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ಆಂಜನೇಯ ಕುಟುಂಬ ಸದಸ್ಯರು ಭಾನುವಾರ ಬೆಳಗ್ಗೆ ಉದ್ಯಾನವನದ ಎದುರು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.