Advertisement

ಒಂದೇ ವಾರದಲ್ಲಿ 200 ಚಿತ್ರಮಂದಿರಗಳಿಂದ ಟೈಗರ್‌ ಗಲ್ಲಿ ಔಟ್‌

10:30 AM Nov 06, 2017 | |

ಬಹುಶಃ ಇತ್ತೀಚಿನ ದಿನಗಳಲ್ಲೇ ಅತ್ಯಂತೆ ಹೆಚ್ಚು ಸದ್ದು-ಗದ್ದಲದ ಮಧ್ಯೆ ಬಿಡುಗಡೆಯಾದ ಚಿತ್ರವೆಂದರೆ ಅದು ರವಿ ಶ್ರೀವತ್ಸ ನಿರ್ದೇಶನದ ಮತ್ತು ಸತೀಶ್‌ ನೀನಾಸಂ ಅಭಿನಯದ “ಟೈಗರ್‌ ಗಲ್ಲಿ’ ಎಂದರೆ ತಪ್ಪಿಲ್ಲ. ಈ ಚಿತ್ರವು ಅಕ್ಟೋಬರ್‌ 27ರಂದು ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿತ್ತು. ಅದಾಗಿ ಒಂದೇ ವಾರದ ಅಂತರದಲ್ಲಿ ಇದೀಗ ಬೆರಳಣಿಕೆಯಷ್ಟು ಚಿತ್ರಮಂದಿರಗಳಿಗೆ ಇಳಿದಿದೆ.

Advertisement

ಹೌದು, ಸತೀಶ್‌ ನೀನಾಸಂ ಅವರೇ ಹೇಳಿಕೊಂಡಂತೆ, “ಟೈಗರ್‌ ಗಲ್ಲಿ’ ತಮ್ಮ ವೃತ್ತಿಜೀವನದಲ್ಲೇ ಒಂದು ದೊಡ್ಡ ಚಿತ್ರವಾಗಿತ್ತು. ಅವರ ಯಾವೊಂದು ಚಿತ್ರವು ಅಷ್ಟೊಂದು ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರಲಿಲ್ಲ. ಆದರೆ, “ಟೈಗರ್‌ ಗಲ್ಲಿ’ ಅವರ ಹಿಂದಿನ ಎಲ್ಲಾ ಚಿತ್ರಗಳ ದಾಖಲೆ ಮತ್ತು ಹೆಗ್ಗಳಿಕೆಗಳನ್ನು ಮುರಿದು, 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅಬ್ಬರದಿಂದ ಬಿಡುಗಡೆಯಾಗಿತ್ತು.

ಆದರೆ, ಅದಾಗಿ ಒಂದೇ ವಾರಕ್ಕೆ ನೋಡಿದರೆ, ಚಿತ್ರ ಬೆರಳಣಿಕೆಯಷ್ಟು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಚಿತ್ರವು, ಈಗ ಒಂದೇ ವಾರದಲ್ಲಿ 200 ಚಿತ್ರಮಂದಿರಗಳಿಂದ ಔಟ್‌ ಆಗಿ 10ರಿಂದ 12 ಚಿತ್ರಮಂದಿರಗಳಲ್ಲಷ್ಟೇ ಪ್ರದರ್ಶನ ಕಾಣುತ್ತಿದೆ.

ಮೂಲ ಚಿತ್ರಮಂದಿರವಾದ ಭೂಮಿಕಾದಲ್ಲೇ “ಟೈಗರ್‌ ಗಲ್ಲಿ’ಯ ಪ್ರದರ್ಶನದ ಸಂಖ್ಯೆ ಕಡಿಮೆಯಾಗಿದೆ ಎನ್ನುವುದು ವಿಚಿತ್ರ. ಅಲ್ಲಿಗೆ, ಭಾರೀ ಸದ್ದು ಮಾಡಿದ “ಟೈಗರ್‌ ಗಲ್ಲಿ’ ಹೆಚ್ಚು ಸದ್ದು ಮಾಡದೆ, ಬೆರಳಣಿಕೆಯಷ್ಟು ಚಿತ್ರಮಂದಿರಗಳಿಗೆ ಇಳಿದು ಹೋಗಿದೆ. ಮುಂದಿನ ವಾರದ ಹೊತ್ತಿಗೆ ಅದೂ ಮಾಯವಾದರೆ ಆಶ್ಚರ್ಯವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next