ಸಾಮಾಜಿಕ ಜಾಲತಾಣಗಳಲ್ಲಿ ವನ್ಯ ಜೀವಿಗಳಿಗೆ ಸಂಬಂಧಪಟ್ಟ ಅನೇಕ ವಿಡಿಯೋಗಳು ಹರಿದಾಡುತ್ತಿರುತ್ತವೆ, ಅದರಲ್ಲಿ ಕೆಲವೊಂದು ಮನಸ್ಸಿಗೆ ಮುದ ನೀಡುವಂತ್ತಿದ್ದರೆ ಇನ್ನು ಕೆಲವು ಮೈ ಜುಂ ಎನಿಸುವ ರೀತಿಯಲ್ಲಿ ಇರುತ್ತದೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋ ಸಫಾರಿಗೆ ಹೋದವರ ಬೆವರಿಳಿಸಿದ್ದು ಅಲ್ಲದೆ ವಿಡಿಯೋ ನೋಡುವವರ ಮೈ ಜುಂ ಎನ್ನುವಂತೆ ಮಾಡಿದೆ.
ಎರಡು ಹುಲಿಗಳ ಕಾಳಗದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ಸಫಾರಿಗೆ ಹೋದ ಪ್ರವಾಸಿಗರ ಎದುರೇ ಎರಡು ಹುಲಿಗಳು ಕಾದಾಡಿಕೊಂಡಿದ್ದು ಸಫಾರಿಗೆ ಹೋದ ಪ್ರವಾಸಿಗರ ಮೈಯಲ್ಲಿ ಬೆವರು ಇಳಿಯುವಂತೆ ಮಾಡಿದೆ. ವಾಹನದ ಪಕ್ಕದಲ್ಲೇ ದೈತ್ಯ ಹುಲಿಗಳ ಹೊಡೆದಾಟ ಪ್ರವಾಸಿಗರನ್ನೇದಂಗಾಗಿಸಿದೆ.
ಈ ಹುಲಿಗಳ ಕಾಳಗದ ವಿಡಿಯೋ ಸಫಾರಿಗೆ ಹೋದ ಪ್ರವಾಸಿಗರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಈ ವೀಡಿಯೊವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ one_earth__one_life ಹೆಸರಿನ ಖಾತೆಯೊಂದಿಗೆ ಹಂಚಿಕೊಂಡಿದ್ದಾರೆ, ಸದ್ಯ ಭಾರಿ ವೈರಲ್ ಆಗಿರುವ ವಿಡಿಯೋ ವನ್ಯ ಮೃಗಗಳ ಕಾಳಗ ಯಾವ ರೀತಿ ಇರುತ್ತದೆ ಎಂಬುದನ್ನು ತೋರಿಸುವಂತಿದೆ.
Related Articles
ಇದನ್ನೂ ಓದಿ : ಪಶ್ಚಿಮ ಬಂಗಾಳ: ಕಾರ್ಯಕ್ರಮದಲ್ಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅಸ್ವಸ್ಥ