ಕೊಟ್ಟಿಗೆಹಾರ: ಭಾರತಿಬ್ಯೆಲು, ಕನ್ನಗೆರೆ ಕಣ್ಣ ಕಾಫಿ ಎಸ್ಟೇಟ್ ನಲ್ಲಿ ಗುರುವಾರ ರಾತ್ರಿ ಹುಲಿ ಸುಮಾರು ಮೂರು ಹಸುಗಳನ್ನು ಮತ್ತು ಒಂದು ಕರುವನ್ನು ಬೇಟೆಯಾಡಿ ಅಟ್ಟಹಾಸ ಮೆರೆದಿದೆ.
ಒಂದು ಹಸು ಜೀವ ಉಳಿಸಿಕೊಂಡು ಕನ್ನಗೆರೆ ಗ್ರಾಮಕ್ಕೆ ಓಡಿ ಬಂದಿದ್ದು. ಇನ್ನೆರಡು ಹಸು ಹಾಗು ಕರು ಪ್ರಾಣ ಬಿಟ್ಟಿದ್ದು ಒಂದನ್ನು ಬಹುಪಾಲು ಹುಲಿ ತಿಂದಿದೆ. ಗರ್ಭ ಧರಿಸಿದ್ದ ಹಸುವಿನ ಹೊಟ್ಟೆಯಿಂದ ಕರವನ್ನು ಹೊರಹಾಕಿ ತಿಂದಿರುವ ಭಯಾನಕ ದೃಶ್ಯವನ್ನು ಗ್ರಾಮಸ್ಥರು ಕಂಡು ಬೆಚ್ಚಿಬಿದ್ದಿದ್ದಾರೆ.
ಈ ಭಾಗದಲ್ಲಿ ಕಳೆದ ಕೆಲವು ದಿವಸಗಳಿಂದ ಎರಡು ಹುಲಿಗಳು ಸಂಚರಿಸುತ್ತಿದ್ದು. ಅನೇಕ ಪ್ರಾಣಿಗಳನ್ನು ಇದುವರೆಗೂ ಬೇಟೆಯಾಡಿರುವ ವರದಿಯಾಗಿದ್ದು. ಕೂಡಲೇ ಜೀವಹಾನಿ ಸಂಭವಿಸುವ ಮುಂಚೆ ಈ ಹುಲಿಗಳನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಅಗ್ರಹಿಸಿದ್ದಾರೆ.
ಉಪವಲಯ ಅರಣ್ಯ ಅಧಿಕಾರಿ ಉಮೇಶ್, ಅರಣ್ಯ ರಕ್ಷಕ ಮೋಹಸೀನ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.