Advertisement

ಶಾರ್ಜಾದ ಐಪಿಎಲ್ ಪಂದ್ಯದಲ್ಲಿ ಹುಲಿ ಕುಣಿತದ ಸಂಭ್ರಮ: ವಿಡಿಯೋ ವೈರಲ್

11:24 AM Sep 25, 2021 | Team Udayavani |

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ ನ ಹೈವೋಲ್ಟೆಜ್ ಪಂದ್ಯಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಶುಕ್ರವಾರ ಶಾರ್ಜಾದಲ್ಲಿ ನಡೆಯಿತು.

Advertisement

ಧೋನಿ- ಕೊಹ್ಲಿ ನಡುವಿನ ಹಣಾಹಣಿಯಲ್ಲಿ ಧೋನಿ ಪಡೆ ಜಯ ಸಾಧಿಸಿತು. ಉತ್ತಮ ಆರಂಭ ಪಡೆದಿದ್ದ ಬೆಂಗಳೂರು ತಂಡ ದ್ವಿತೀಯಾರ್ಧದಲ್ಲಿ ರನ್ ಕಲೆ ಹಾಕಲು ಪರದಾಡಿತು. 157 ರನ್ ಗುರಿ ಪಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸುಲಭವಾಗಿ ಗುರಿ ತಲುಪಿತು.

ಸೀಮಿತ ಸಂಖ್ಯೆಯ ಪ್ರೇಕ್ಷಕರಿಗೆ ಮೈದಾನದಲ್ಲಿ ಐಪಿಎಲ್ ವೀಕ್ಷಿಸಲು ಈ ಬಾರಿ ಅವಕಾಶ ನೀಡಲಾಗಿದೆ. ತಮ್ಮ ನೆಚ್ಚಿನ ಫ್ರಾಂಚೈಸಿಯನ್ನು ಬೆಂಬಲಿಸುವ ಅಭಿಮಾನಿಗಳು ಸಂತಸ ಪಡುತ್ತಾರೆ. ಮೈದಾನದಲ್ಲಿ ಹಾಕುವ ಹಾಡುಗಳಿಗೆ ಹುಚ್ಚೆದ್ದು ಕುಣಿಯುತ್ತಾರೆ.

ಇದನ್ನೂ ಓದಿ:ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಬ್ರಾವೋ ಜೊತೆ ಜಗಳವಾಡಿದ ಸಿಎಸ್ ಕೆ ನಾಯಕ ಧೋನಿ

ಆರ್ ಸಿಬಿ – ಸಿಎಸ್ ಕೆ ಪಂದ್ಯದ ವೇಳೆಯೂ ಅಭಿಮಾನಿಗಳು ಕುಣಿದ ವಿಡಿಯೋ ವೈರಲ್ ಆಗಿದೆ. ಹುಲಿ ಕುಣಿತದ ಹಾಡಿಗೆ ಆರ್ ಸಿಬಿ ಅಭಿಮಾನಿಗಳು ಮನಸೋ ಇಚ್ಛೆ ಕುಣಿದಿದ್ದಾರೆ. ಯುವಕರು- ಯುವತಿಯರು ಸೇರಿದಂತೆ ಆರ್ ಸಿಬಿ ಅಭಿಮಾನಿಗಳು ಹುಲಿ ಕುಣಿತವಾಡಿದ ವಿಡಿಯೋ ವೈರಲ್ ಆಗಿದೆ.

Advertisement

ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ ತಂಡ ಆರು ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತ್ತು. ನಾಯಕ ವಿರಾಟ್ ಕೊಹ್ಲಿ 53 ರನ್, ದೇವದತ್ತ ಪಡಿಕ್ಕಲ್ 70 ರನ್ ಗಳಸಿದ್ದರೆ, ಸಿಎಸ್ ಕೆ ಪರ ಬ್ರಾವೋ ಮೂರು ವಿಕೆಟ್ ಕಿತ್ತರು.

ಗುರಿ ಬೆನ್ನತ್ತಿದ್ದ ಸಿಎಸ್ ಕೆ ತಂಡ ನಾಲ್ಕು ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತು. ಗಾಯಕ್ವಾಡ್ 38 ರನ್, ಡು ಪ್ಲೆಸಿಸ್ 31 ರನ್, ರಾಯುಡು 32 ರನ್ ಗಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next