Advertisement

ಪಿಲಿಕುಳ ಜೈವಿಕ ಉದ್ಯಾನವನದ ಹುಲಿ ಮರಿ ಸಾವು

12:36 PM Nov 14, 2022 | Team Udayavani |

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹುಲಿಗಳ ಮಧ್ಯೆ ನಡೆದ ಕಚ್ಚಾಟದಲ್ಲಿ ಸುಮಾರು 2 ವರ್ಷದ ಹುಲಿಮರಿಯೊಂದು ಕೆಲ ಸಮಯದ ಹಿಂದ ತೀವ್ರವಾಗಿ ಗಾಯಗೊಂಡಿದ್ದು, ಜೈವಿಕ ಉದ್ಯಾನವನದ ವೈದ್ಯಾಧಿಕಾರಿ ಡಾ. ವಿಷ್ಣು ದತ್, ಡಾ.ಮಧುಸೂದನ ಮತ್ತು ಡಾ.ಯಶಸ್ವಿ ಶಸ್ತ್ರ ಚಿಕಿತ್ಸೆ ನೀಡಿದ ಬಳಿಕ ಹುಲಿ ಚೇತರಿಸಿಕೊಂಡು ಸಹಜ ಸ್ಥಿತಿಗೆ ಮರಳಿತ್ತು.

Advertisement

ಆದರೆ ನ.11 ರಂದು ಮಧ್ಯಾಹ್ನ ಹುಲಿ ಮರಿಯ ಆರೋಗ್ಯ ಏರುಪೇರುಗೊಂಡಿದ್ದು, ವೈದ್ಯಾಧಿಕಾರಿಗಳು ಶುಶ್ರೂಷೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದೆ.

ಮೃತ ಹುಲಿ ಮರಿಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಕಿಡ್ನಿ ಮತ್ತು ಅಂಗಾಂಗಳ ವೈಫಲ್ಯ ಸಮಸ್ಯೆ ಕಂಡು ಬಂದಿದೆ ಎಂದು ಡಾ. ವಿಷ್ಣು ದತ್ ತಿಳಿಸಿದ್ದಾರೆ.

ಮೃತ ಹುಲಿಯ ಅಂಗಾಂಗಗಳ ಮಾದರಿಯನ್ನು ಪರೀಕ್ಷೆಗಾಗಿ ಉತ್ತರ ಪ್ರದೇಶದ ಐ.ವಿ.ಆರ್.ಐ., ಬರೇಲಿ ಮತ್ತು ಬೆಂಗಳೂರಿನ ಐ.ಎ.ಹೆಚ್.ಅಂಡ್ ವಿ.ಬಿ. ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಮರಿಯು ಪಿಲಿಕುಳದಲ್ಲಿಯೇ ಜನಿಸಿದ್ದಾಗಿದೆ. ಪಿಲಿಕುಳದಲ್ಲಿ ಹುಲಿಗಳ ಸಂಖ್ಯೆ 11 ಕ್ಕೆ ಇಳಿದಿದೆ ಎಂದು ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next