Advertisement

ಹುಣಸೂರು : ನಾಗರಹೊಳೆಯಲ್ಲಿ ಗಂಡು ಹುಲಿ ಕಳೆಬರ ಪತ್ತೆ

10:59 PM Jun 04, 2022 | Team Udayavani |

ಹುಣಸೂರು : ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಮೂರು ವರ್ಷದ ಗಂಡು ಹುಲಿಯ ಕಳೆಬರ ಶನಿವಾರ ಪತ್ತೆಯಾಗಿದೆ.

Advertisement

ನಾಗರಹೊಳೆ ವನ್ಯಜೀವಿ ವಲಯದ ಗೋಣಿಗದ್ದೆ ಶಾಖೆಯ ಕುಂದೂರು ಗಸ್ತಿನ ನಾಗಸಾರಕೆರೆ ಸಮೀಪ ಶನಿವಾರ ಮುಂಜಾನೆ ಗಸ್ತಿನಲ್ಲಿದ್ದ ಸಿಬ್ಬಂದಿಗಳು ಪತ್ತೆ ಹಚ್ಚಿದ್ದು, ಸಿಬ್ಬಂದಿಗಳು ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ನಾಗರಹೊಳೆ ಹುಲಿ ಯೋಜನೆ ನಿರ್ಧೇಶಕ ಮಹೇಶ್‌ಕುಮಾರ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಹುಲಿಯ ಹಲ್ಲು, ಉಗುರು ಹಾಗೂ ಎಲ್ಲಾ ಅಂಗಾಂಗಗಳು ಸುರಕ್ಷಿತವಾಗಿದ್ದು, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ನಿಗಧಿಪಡಿಸಿರುವ ಮಾರ್ಗಸೂಚಿಯಂತೆ (ಎಸ್.ಒ.ಪಿ.) ಯಂತೆ ಹುಲಿಯ ಮರಣೋತ್ತರ ಪರೀಕ್ಷೆ ನೆರವೇರಿಸಲಾಗಿದೆ.

ಈ ವೇಳೆ ಎಸಿಎಫ್ ಗೋಪಾಲ್, ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾದ ವೆಂಕಟನಾಯ್ಡು, ನಾಗರಹೊಳೆ ವಲಯ ಅರಣ್ಯಾಧಿಕಾರಿ ಮಹಮ್ಮದ್ ಜೀಷಾ ಮತ್ತಿತರಿದ್ದರು.

ಇದನ್ನೂ ಓದಿ : ಬೆಂಗಳೂರು : ಪೂರ್ವ ಭಾಗದಲ್ಲಿ ಭರ್ಜರಿ ಮಳೆ, 10 ಮರಗಳು ಧರೆಗೆ

Advertisement

ಅಂಗಾಂಗ ಪ್ರಯೋಗಾಲಯಕ್ಕೆ : ಹುಲಿಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಹುಲಿಯು ಅನಾರೋಗ್ಯದಿಂದ ಸಾವನ್ನಪ್ಪಿರುವ ಶಂಕೆ ಇದ್ದು, ನೈಜ ಕಾರಣ ತಿಳಿಯಲು ಅಂಗಾಂಗಳ ಮಾದರಿಯನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರವಷ್ಟೆ ನಿಖರ ಮಾಹಿತಿ ತಿಳಿಯಲಿದೆ ಎಂದು ಡಿಸಿಎಫ್ ಮಹೇಶ್‌ಕುಮಾರ್ ಉದಯವಾಣಿಗೆ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next