Advertisement

ಮೈಸೂರು: ವ್ಯಕ್ತಿಯನ್ನು ಬಲಿ ಪಡೆದ ತಂಬಾಕು ಜಮೀನಿನಲ್ಲಿ ಅಡಗಿದ್ದ ಹುಲಿ

05:35 PM Jul 31, 2022 | Team Udayavani |

ಮೈಸೂರು: ಹುಲಿ ದಾಳಿಗೆ ದನ ಮೇಯಿಸುತ್ತಿದ್ದ ವ್ಯಕ್ತಿ ದಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ನಂಜನಗೂಡು ತಾಲೂಕಿನ ಹಾದನೂರ ಒಡೆಯನಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.

Advertisement

ಒಡೆಯನಪುರ ಗ್ರಾಮದ ಪುಟ್ಟಸ್ವಾಮಿ (46) ಮೃತ ದುರ್ದೈವಿಯಾಗಿದ್ದು, ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಂಚಿನಲ್ಲಿ ಅವಘಡ ನಡೆದಿದೆ.

ನಂಜದೇವರ ಬೆಟ್ಟದ ಬಳಿಯಿರುವ ತಮ್ಮ ಜಮೀನಿನಲ್ಲಿ ದನ ಮೇಯಿಸುವಾಗ ಹುಲಿ ದಾಳಿ ನಡೆಸಿದ್ದು, ಪುಟ್ಟಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಂಬಾಕು ಬೆಳೆ ಜಮೀನಿನಲ್ಲಿ ಅಡಗಿ ಕುಳಿತಿದ್ದ ಹುಲಿ ಏಕಾಏಕಿ ದಾಳಿ ಮಾಡಿ ದನಗಾಹಿಯನ್ನು ಸಾಯಿಸಿ ಒಂದು ಜಾನುವಾರುವನ್ನೂ ಕೂಡ ಬಲಿ ಪಡೆದಿದೆ. ಘಟನೆ ಬಳಿಕ ಹಾದನೂರ ಒಡೆಯನಪುರ ಗ್ರಾಮದ ರೈತರು ಅರಣ್ಯ ಇಲಾಖೆ ವಿರುದ್ಧ ರೊಚ್ಚಿಗೆದ್ದಿದ್ದು, ಹೆಡಿಯಾಲ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next