Advertisement
ದತ್ತ ಕಳೆದ 45 ವರ್ಷಗಳಿಂದ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸಿ ಕಳೆದ 10 ವರ್ಷಗಳಿಂದ ಶಾಸಕನಾಗಿ ಇದೀಗ ಸೋತಿದ್ದಾರೆ. ಅದೇ ರೀತಿ ಎಸ್.ಆರ್. ಲಕ್ಷ್ಮಯ್ಯನವರ ಕುಟುಂಬವು ನಮ್ಮ ರಾಜಕೀಯ ಭವಿಷ್ಯದಲ್ಲಿ ಸಹಕಾರ ನೀಡುತ್ತಿದೆ. ಅದೇ ಹಾದಿಯಲ್ಲೇ ಅವರ ಮಕ್ಕಳಾದಧರ್ಮೇಗೌಡ, ಭೋಜೇಗೌಡರು ಇದ್ದಾರೆ ಎಂದರು.
ಕಡೂರು ಕ್ಷೇತ್ರಕ್ಕೆ ವೈ.ಎಸ್.ವಿ ದತ್ತ ಮತ್ತು ಎಸ್. ಎಲ್.ಧರ್ಮೇಗೌಡರು ಎರಡು ಕಣ್ಣುಗಳಿದ್ದಂತೆ. ಧರ್ಮೇಗೌಡರು ಮುಂದಿನ 6 ವರ್ಷಗಳವರೆಗೆ ಶಾಸಕರಾಗಿರುತ್ತಾರೆ. ಅವರಿಂದ ಏನೇ ದೂರು ಬಂದರೂ ನಮ್ಮ ಮನೆಗೆ ಕರೆಸಿ ನಾನೇ ತೀರ್ಮಾನ ಮಾಡುತ್ತೇನೆ. ಬಹಿರಂಗವಾಗಿ ಹೇಳಿಕೆ ಬೇಡ ಪಕ್ಷದ ಸಂಘಟನೆಗೆ ದುಡಿಯಿರಿ, ಪಕ್ಷಕ್ಕೆ ಶಕ್ತಿ ತುಂಬಿ ಎಂದರು.
ನಾನು ಅವರೊಂದಿಗೆ ಸೇರಿಕೊಂಡು ನೀರಾವರಿ ಯೋಜನೆ, ರೈತರ ಸಮಸ್ಯೆಗಳಿಗೆ ಅವರ ಮಾರ್ಗದರ್ಶನದಲ್ಲಿ ಕಡೂರು ಜನತೆಯ ವಿಶ್ವಾಸ ಗೆಲ್ಲುತ್ತೇನೆ ಎಂದರು.
Related Articles
Advertisement
ಮಾಜಿ ಶಾಸಕ ಮತ್ತು ಜೆಡಿಎಸ್ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವೈ.ಎಸ್.ವಿ ದತ್ತ ಮಾತನಾಡಿ, ಹೆಬ್ಬೆ ಯೋಜನೆಗೆ ಸರಕಾರ 100 ಕೋಟಿ ರೂ. ಮೀಸಲಿಟ್ಟಿದೆ. ಈ ಹಿಂದಿನ ಸರಕಾರ ಈ ಯೋಜನೆ ಅನುಷ್ಠಾನಕ್ಕೆ ನಕಾರಾತ್ಮಕವಾಗಿ ಉತ್ತರ ನೀಡಿದ್ದರೂ ಸಹ ಮಾನವೀಯತೆ ದೃಷ್ಠಿಯಿಂದ ಸರಕಾರ ಈ ನಿರ್ಧಾರ ತೆಗೆದುಕೊಂಡಿದ್ದು ನಾನು ಸಹ ಹೆಬ್ಬೆ ಯೋಜನೆ ಅನುಷ್ಠಾನಕ್ಕೆ ಕೋರುತ್ತೇನೆ ಎಂದರು.ಜಿಲ್ಲಾ ಜೆಡಿಎಸ್ ಅಧ್ಯಕ್ಷ ಅಜಿತ್ ರಂಜನ್ ಕುಮಾರ್, ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣ, ತಾಲೂಕು ಅಧ್ಯಕ್ಷ ಕೋಡಿಹಳ್ಳಿಮಹೇಶ್ವರಪ್ಪ, ಬಂಡಾರಿ ಶ್ರೀನಿವಾಸ್, ಜಿಗಣೆಹಳ್ಳಿ ನೀಲಕಂಠಪ್ಪ, ಸೀಗೆಹಡ್ಲು ಹರೀಶ್, ಶೂದ್ರ ಶ್ರೀನಿವಾಸ್ ಇತರರು ಪಾಲ್ಗೊಂಡಿದ್ದರು.
ಚುನಾವಣೆ ಗೆಲುವಿಗಾಗಿ ಬಿಜೆಪಿಯವರು ಏನು ಬೇಕಾದ್ರೂ ಮಾಡ್ತಾರೆ ಬಿಜೆಪಿಯವರು ಚುನಾವಣೆ ಗೆಲ್ಲಲು ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ. ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರ ಇಮೇಜ್ ಈಗ ಕಡಿಮೆಯಾಗಿರುವುದರಿಂದ ಲೋಕಸಭೆ ಚುನಾವಣೆ ಗೆಲ್ಲಲು ಏನೂ ಬೇಕಾದರೂಮಾಡುತ್ತಾರೆ ಎಂದರು. ಕುಮಾರಸ್ವಾಮಿ ಅವರ ಸಾಲಮನ್ನಾ ಯೋಜನೆಯನ್ನು ಟೀಕಿಸಿದ್ದ ಮೋದಿ ಅವರು, ರೈತರ ಸಾಲ ಮನ್ನಾ ಮಾಡುವುದು ಪಾಪದ ಕೆಲಸ ಎಂದಿದ್ದರು. ಆದರೆ ಈಗ ರೈತರ ಖಾತೆಗೆ ಭಿಕ್ಷುಕರಿಗೆ ನೀಡುವಂತೆ ವಾರ್ಷಿಕವಾಗಿ 6 ಸಾವಿರ ರೂ. ಹಾಕುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಬಿಜೆಪಿಯವರಿಗೆ ರೈತರ ಮೇಲೆ ಕಾಳಜಿ ಇದ್ದಿದ್ದೇ ಆದಲ್ಲಿ ಈ ಯೋಜನೆಯನ್ನು ಮೊದಲೇ ಘೋಷಿಸಬೇಕಿತ್ತು. ಚುನಾವಣಾ ಸಂದರ್ಭದಲ್ಲಿ ಈ ಯೋಜನೆ ಘೋಷಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ನಾಲ್ಕು ವರ್ಷಗಳಲ್ಲಿ ರೈತರಿಗೆ, ಸಾಮಾನ್ಯ ಜನರಿಗೆ ಯಾವ ಜನಪರ ಕೊಡುಗೆಗಳನ್ನೂ ನೀಡಿಲ್ಲ. ರಾಜ್ಯದ ಪಾಲಿನ ಅನುದಾನವನ್ನೂ ಸಮರ್ಪಕವಾಗಿ ನೀಡಿಲ್ಲ. ನರೇಗಾದಡಿಯಲ್ಲಿ ಕೇಂದ್ರ ಸರ್ಕಾರ ಎರಡೂವರೆ ಸಾವಿರ ಕೋಟಿ ರೂ. ಅನುದಾನ ನೀಡಬೇಕಿದೆ. ಅತೀವೃಷ್ಟಿಗೆ ಪರಿಹಾರದ ರೂಪದಲ್ಲಿ 900 ಕೋಟಿ ರೂ. ಬರಬೇಕಿದೆ. ರಾಜ್ಯದಲ್ಲಿ 142 ತಾಲೂಕು ಬರಪೀಡಿತ ಎಂದು ಘೋಷಿಸಿದರೂ ಕೇಂದ್ರ ಸರ್ಕಾರ ಬಿಡಿಗಾಸನ್ನೂ ನೀಡಿಲ್ಲ. ಈ ಬಗ್ಗೆ ಬಿಜೆಪಿ ಮುಖಂಡರು ಮಾತೇ ಆಡುವುದಿಲ್ಲ. ವಿಧಾನಪರಿಷತ್ ಉಪಸಭಾಪತಿ ಎಸ್. ಎಲ್.ಧರ್ಮೇಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಂಜನ್ ಅಜಿತ್ ಕುಮಾರ್ ಉಪಸ್ಥಿತರಿದ್ದರು.