Advertisement
ಫ್ರಾನ್ಸೆಸ್ ಥಿಯಾಫೊ 3 ವರ್ಷಗಳಲ್ಲಿ ಯುಎಸ್ ಓಪನ್ ಸೆಮಿಫೈನಲ್ ಪ್ರವೇಶಿಸುತ್ತಿರುವುದು ಇದು 2ನೇ ಸಲ. ಬಲ್ಗೇರಿಯಾದ ಎದುರಾಳಿ ಗ್ರಿಗರ್ ಡಿಮಿಟ್ರೋವ್ 4ನೇ ಸೆಟ್ ವೇಳೆ ಗಾಯಾಳಾದ ಕಾರಣ ನಿವೃತ್ತರಾಗಬೇಕಾಯಿತು. ಆಗ ಥಿಯಾಫೊ 6-3, 6-7 (5-7), 6-3, 4-1ರ ಮುನ್ನಡೆಯಲ್ಲಿದ್ದರು.
Related Articles
Advertisement
2005ರ ಬಳಿಕ…ಇದು 2005ರ ಬಳಿಕ ಗ್ರ್ಯಾನ್ಸ್ಲಾಮ್ ಪಂದ್ಯಾ ವಳಿಯ ಸೆಮಿಫೈನಲ್ನಲ್ಲಿ ಅಮೆರಿಕದವರಿಬ್ಬರು ಪರಸ್ಪರ ಎದುರಾಗುತ್ತಿರುವ ಮೊದಲ ನಿದರ್ಶನ. ಅಂದಿನ ಯುಎಸ್ ಓಪನ್ನಲ್ಲಿ ಆ್ಯಂಡ್ರೆ ಅಗಾಸ್ಸಿ ಮತ್ತು ರಾಬಿ ಜಿನೆಪ್ರಿ ಮುಖಾಮುಖೀ ಆಗಿದ್ದರು. ಉಳಿದೆರಡು ಕ್ವಾರ್ಟರ್ ಫೈನಲ್ನಲ್ಲಿ ಜಾನಿಕ್ ಸಿನ್ನರ್-ಡ್ಯಾನಿಲ್ ಮೆಡ್ವೆಡೇವ್, ಅಲೆಕ್ಸ್ ಡಿ ಮಿನೌರ್-ಜಾಕ್ ಡ್ರಾಪರ್ ಮುಖಾಮುಖೀ ಆಗಲಿದ್ದಾರೆ. ನವಾರೊ: ಮೊದಲ ಸೆಮಿಫೈನಲ್
ವನಿತಾ ಸಿಂಗಲ್ಸ್ನಲ್ಲಿ ಅಮೆರಿಕದ ಎಮ್ಮಾ ನವಾರೊ ಮೊದಲ ಸಲ ಗ್ರ್ಯಾನ್ಸ್ಲಾಮ್ ಸೆಮಿಫೈನಲ್ ತಲುಪಿದ್ದಾರೆ. ಅವರು ಪೌಲಾ ಬಡೋಸಾ ವಿರುದ್ಧ 6-2, 7-5ರಿಂದ ಗೆದ್ದು ಬಂದರು. ಮುಂದಿನ ಎದುರಾಳಿ ಬೆಲರೂಸ್ನ ಅರಿನಾ ಸಬಲೆಂಕಾ. ಇವರು ಪ್ಯಾರಿಸ್ ಒಲಿಂಪಿಕ್ಸ್ ಚಾಂಪಿಯನ್, ಚೀನದ ಕ್ವಿನ್ವೆನ್ ಜೆಂಗ್ ವಿರುದ್ಧ 6-1, 6-2 ಅಂತರದ ಜಯ ಸಾಧಿಸಿದರು. ಬೋಪಣ್ಣ ಜೋಡಿಗೆ ಸೋಲು
ಯುಎಸ್ ಓಪನ್ ಮಿಶ್ರ ಡಬಲ್ಸ್ ಸಮಿಫೈನಲ್ನಲ್ಲಿ ರೋಹನ್ ಬೋಪಣ್ಣ- ಅಲ್ದಿಲಾ ಸುಜಿಯಾದಿ ಸೋಲನುಭವಿಸಿದರು. ಆತಿಥೇಯ ಅಮೆರಿಕದ ಯುವ ಜೋಡಿಯಾದ ಡೊನಾಲ್ಡ್ ಯಂಗ್-ಟೇಲರ್ ಟೌನ್ಸೆಂಡ್ ವಿರುದ್ಧದ ಪಂದ್ಯವನ್ನು ಇವರು 3-6, 4-6ರಿಂದ ಕಳೆದುಕೊಂಡರು.