Advertisement

‘ತುರ್ತು ನಿರ್ಗಮನ’ಜೂನ್ 24ಕ್ಕೆ ತೆರೆಗೆ : ಸ್ಯಾಂಡಲ್ ವುಡ್ ಗೆ ಸುನೀಲ್ ರಾವ್ ಪುನರಾಗಮನ

08:37 PM Jun 15, 2022 | Team Udayavani |

ಬೆಂಗಳೂರು : ‘ಎಕ್ಸ್ ಕ್ಯೂಸ್ ಮೀ’ ಚಿತ್ರದ ಮೂಲಕ ಖ್ಯಾತಿ ಪಡೆದ ನಟ ಸುನೀಲ್ ರಾವ್ ಅವರು ಅಭಿನಯಿಸಿರುವ ‘ತುರ್ತು ನಿರ್ಗಮನ’ ಚಿತ್ರ ಜೂನ್ 24ರಂದು ಬಿಡುಗಡೆಯಾಗಲಿದೆ.

Advertisement

ಕೋವಿಡ್ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆ ತಡವಾಗಿದ್ದು, ದೊಡ್ಡ ಗ್ಯಾಪ್ ನ ನಂತರ ಸುನೀಲ್ ಅಭಿನಯದ ಚಿತ್ರವೊಂದು ಬಿಡುಗಡೆಯಾಗುತ್ತಿದೆ.

ಹೇಮಂತ್ ಕುಮಾರ್‌ ನಿರ್ದೇಶನದ ಚಿತ್ರದಲ್ಲಿ ನಟ ಮತ್ತು ನಿರ್ದೇಶಕ ರಾಜ್ ಬಿ. ಶೆಟ್ಟಿ ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ನಟಿ ಸುಧಾರಾಣಿ ನರ್ಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಕಿರಿಕ್ ಪಾರ್ಟಿ’ ಖ್ಯಾತಿಯ ಸಂಯುಕ್ತಾ ಹೆಗಡೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಿತಾ ಚಂದ್ರಶೇಖರ್, ಅಚ್ಯುತ್ ಕುಮಾರ್, ಅರುಣಾ ಬಾಲರಾಜ್ ಹಲವು ಖ್ಯಾತ ನಾಮರೂ ಮುಖ್ಯ ಭೂಮಿಕೆಯಲ್ಲಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಟ್ರೇಲರ್ ಗೆ ಜನರು ಉತ್ತಮ ಸ್ಪಂದನೆ ತೋರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next