Advertisement

ಗುರುವಾರದ ರಾಶಿ ಫಲ: ಅತಿಯಾದ ಉದಾರತೆ ಸಮಸ್ಯೆ ತಂದೀತು, ಮಕ್ಕಳ ವಿಚಾರದಲ್ಲಿ ತೃಪ್ತಿ

07:40 AM Nov 17, 2022 | Team Udayavani |

ಮೇಷ: ಉದ್ಯೋಗ ವ್ಯವಹಾರಗಳಲ್ಲಿ ಸರ್ಕಾರೀ ಕೆಲಸಗಳಲ್ಲಿ ನಿರೀಕ್ಷೆಗೂ ಮೀರಿದ ಸಫ‌ಲತೆ. ಅಧಿಕ ಧನಸಂಪತ್ತಿನ ಲಾಭ. ಸರ್ವ ರೀತಿಯಲ್ಲೂ ಸುಖ ಸಂತೋಷ ಲಭಿಸಲಿದೆ. ಸಂದಭಕ್ಕೆ ಸರಿಯಾಗಿ ಜ್ಞಾನ ಪ್ರದರ್ಶನ. ಗೃಹದಲ್ಲಿ ಸಂಭ್ರಮದ ವಾತಾವರಣ.

Advertisement

ವೃಷಭ: ವಿದ್ಯೆ ಜ್ಞಾನ ಪ್ರದರ್ಶನದಿಂದ ಜನಮನ್ನಣೆ. ಅಧಿಕ ಸಂಪತ್ತು ಪ್ರಾಪ್ತಿ. ಗಣ್ಯ ವ್ಯಕ್ತಿಗಳಿಂದ ಗೌರವ ಆದರಗಳು ಲಭ್ಯ. ಮಕ್ಕಳಿಂದ ಸುವಾರ್ತೆ. ಕೆಲಸ ಕಾರ್ಯಗಳಲ್ಲಿ ಪ್ರಾಮಾಣಿಕತೆ. ಸ್ವತ್ಛತೆಯಿಂದ ಕಾರ್ಯ ನಿರ್ವಹಿಸಿದ್ದರಿಂದ ಶ್ವಾಘನೆ.

ಮಿಥುನ: ಅವಿವಾಹಿತರಿಗೆ ವಿವಾಹ ಭಾಗ್ಯ ಕೂಡಿ ಬರುವುದು. ದಂಪತಿಗಳಲ್ಲಿ ಅನುರಾಗ ವೃದ್ಧಿ. ಪಾಲುದಾರಿಕಾ ಕ್ಷೇತ್ರದಲ್ಲಿ ಗಣನೀಯ ಪ್ರಗತಿ. ಧಾರ್ಮಿಕ ಕಾರ್ಯಗಳಲ್ಲಿ ತಲ್ಲೀನತೆ. ಸತ್ಕರ್ಮಕ್ಕಾಗಿ ವ್ಯಯ. ಉತ್ತಮ ಧನಾರ್ಜನೆ.

ಕರ್ಕ: ಗೃಹೋಪಯೋಗಿ ವಸ್ತುಗಳ ಸಂಗ್ರಹ. ಆಸ್ತಿ ವಿಚಾರಗಳಲ್ಲಿ ಸಂತೋಷ ವೃದ್ಧಿ. ಮಾತೃ ಸಮಾನರಿಂದ ಸುಖ ಸಹಕಾರ ಮಾರ್ಗದರ್ಶನದ ಲಾಭ. ಆರೋಗ್ಯದಲ್ಲಿ ಗಣನೀಯ ಸುಧಾರಣೆ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ ಸಂಭವ.

ಸಿಂಹ: ನೂತನ ಮಿತ್ರರ ಭೇಟಿ. ಕೆಲಸ ಕಾರ್ಯಗಳಲ್ಲಿ ಪ್ರಗತಿ. ಸಾಂಸಾರಿಕ ಸುಖ ಮಧ್ಯಮ. ಭೂಮ್ಯಾದಿ ಆಸ್ತಿ ವಾಹನ ವಿಚಾರಗಳಲ್ಲಿ ತಲ್ಲೀನತೆ. ಹಣಕಾಸಿನ ಬಗ್ಗೆ ಪಾರದರ್ಶಕತೆ ಅಗತ್ಯ. ಮಾತಿನಲ್ಲಿ ಸ್ಪಷ್ಟತೆಗೆ ಆದ್ಯತೆಯಿಂದ ಕಾರ್ಯ ಸಪಲತೆ.

Advertisement

ಕನ್ಯಾ: ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಪೂರ್ವಾಪರ ತಿಳಿದು ಪರರಿಗೆ ಉಪಕಾರ ಮಾಡುವುದು. ಅನಗತ್ಯ ವಿಚಾರಗಳಿಗೆ ಆಸ್ಪದ ನೀಡದಿರಿ. ಧನಾರ್ಜನೆ ಉತ್ತಮ. ಉಳಿತಾಯ ಹೂಡಿಕೆಯಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಅನುಕೂಲ ಪರಿಸ್ಥಿತಿ.

ತುಲಾ: ದೀರ್ಘ‌ ಪ್ರಯಾಣ ಸಂಭವ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿನ ಜವಾಬ್ದಾರಿ ಒತ್ತಡ. ಉತ್ತಮ ಧನಾರ್ಜನೆ ಇದ್ದರೂ ಖರ್ಚಿಗೆ ಹಲವಾರು ಮಾರ್ಗಗಳು ಎದುರಾಗುವುವು. ದಂಪತಿಗಳಲ್ಲಿ ತಾಳ್ಮೆ ಇರಲಿ.

ವೃಶ್ಚಿಕ: ನಿರೀಕ್ಷಿತ ಸ್ಥಾನ ಗೌರವ ಆದರಾದಿ ಪ್ರಾಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಸಂತೋಷ. ಸಾಂಸಾರಿಕ ಸುಖ ವೃದ್ಧಿ. ಮಕ್ಕಳ ವಿಚಾರದಲ್ಲಿ ತೃಪ್ತಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ನಿರಂತರ ಧನ ಸಂಪಾದನೆಯಿಂದ ಆತ್ಮಸ್ಥೆ „ರ್ಯ ವೃದ್ಧಿ.

ಧನು: ಆರೋಗ್ಯದಲ್ಲಿ ಪ್ರಗತಿ. ಅಧಿಕ ಧನಾರ್ಜನೆ. ಭೂಮಿ ಆಸ್ತಿ ವ್ಯವಹಾರದಲ್ಲಿ ಮುನ್ನಡೆ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಸಹಾಯ ಒದಗಿ ಅಭಿವೃದ್ಧಿ. ದಾಂಪತ್ಯ ತೃಪ್ತಿದಾಯಕ. ಕುಟುಂಬಿಕರ ಉತ್ತಮ ಸಹಕಾರ ಪ್ರೋತ್ಸಾಹ.

ಮಕರ: ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿಯಿಂದ ಸಂತೋಷ. ಭೂಮ್ಯಾದಿ ವಿಚಾರಗಳಲ್ಲಿ ಹೆಚ್ಚಿದ ಪರಿಶ್ರಮ. ಸಾಂಸಾರಿಕ ಸುಖ ಮಧ್ಯಮ. ಮಕ್ಕಳ ಅಭಿವೃದ್ಧಿಗಾಗಿ ಅಧಿಕ ಧನವ್ಯಯ. ಆರೋಗ್ಯ ವಿಚಾರದಲ್ಲಿ ನಿಗಾ ವಹಿಸಿ.

ಕುಂಭ: ನಾಯಕತ್ವ ಗುಣ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಚರ್ಚೆಯಾದರೂ ಯಶಸ್ಸು ನಿಮ್ಮದಾಗುವ ಸಂಭವ. ಉತ್ತಮ ವರಮಾನ. ವಾಕ್‌ಚತುರತೆ ಪ್ರದರ್ಶನ. ಗುರುಹಿರಿಯರ ಆರೋಗ್ಯ ಮಧ್ಯಮ. ಸಾಂಸಾರಿಕ ಸುಖಕ್ಕೆ ಹೆಚ್ಚು ಪರಿಶ್ರಮ ಸಂಭವ.

ಮೀನ: ಆರೋಗ್ಯ ವೃದ್ಧಿ. ಸಣ್ಣ ಪ್ರಯಾಣದಿಂದ ಲಾಭ. ಉದ್ಯೋಗದಲ್ಲಿ ಪರಿಶ್ರಮಕ್ಕೆ ಸರಿಯಾಗಿ ಅಭಿವೃದ್ಧಿ. ಧನಾರ್ಜನೆ ತೃಪ್ತಿಕರ. ಅತಿಯಾದ ಉದಾರತೆ ಸಮಸ್ಯೆ ತಂದೀತು. ವಸ್ತುನಿಷ್ಠೆಗೆ ಆದ್ಯತೆ ನೀಡಿ. ವ್ಯವಹರಿಸುವುದರಿಂದ ಸಫ‌ಲತೆ. ಸಾಂಸಾರಿಕ ಸುಖ ಮಧ್ಯಮ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next