Advertisement

ಉಡುಪಿಯ ಕಿದಿಯೂರು ಬಳಿ ಸುಳಿಗಾಳಿ : ಸುರುಳಿ ಸುರುಳಿಯಾಗಿ ಆಕಾಶಕ್ಕೆ ಚಿಮ್ಮಿದ ನದಿ ನೀರು!

10:13 AM Sep 14, 2022 | Team Udayavani |

ಮಲ್ಪೆ : ಕಿದಿಯೂರು ಸಮೀಪ ಪಾದೆ ಬಳಿಯ ಹೊಳೆಯಲ್ಲಿ ಅಪರೂಪದ ವಿದ್ಯಮಾನವೊಂದು ಕಾಣಿಸಿದೆ.

Advertisement

ಮಂಗಳವಾರ ಮಧ್ಯಾಹ್ನದ ವೇಳೆ ಮಳೆ ಬೀಳುತ್ತಿದ್ದು ಈ ಸಂದರ್ಭದಲ್ಲಿ ಹೊಳೆಯ ನಡುವೆ ಸುಳಿಗಾಳಿ ಎದ್ದು ನೀರು ಸುರುಳಿ ಸುರುಳಿಯಾಗಿ ಆಗಸಕ್ಕೆ ಚಿಮ್ಮಿತು.

ಬಿಸಿಲು ಮತ್ತು ಮಳೆಯ ವಾತಾವರಣ ಏಕಕಾಲದಲ್ಲಿ ನಿರ್ಮಾಣವಾಗಿದ್ದು, ಈ ವೇಳೆ ಹೊಳೆ ನೀರು ಗಾಳಿಯೊಂದಿಗೆ ಮೇಲೆ ಚಿಮ್ಮಿದೆ ಎನ್ನಲಾಗಿದೆ. ಸಾಮಾನ್ಯವಾಗಿ ಮೈದಾನದಲ್ಲಿ ಸುಳಿಗಾಳಿ ಕಾಣಿಸಿಕೊಂಡು ಧೂಳು ಮೇಲಕ್ಕೆ ಹೋಗುವುದು ಕಾಣಸಿಗುತ್ತದೆ. ಆದರೆ ಹೊಳೆಯಲ್ಲಿ ಸುಳಿ ಕಾಣಿಸಿಕೊಂಡು ನೀರು ಮೇಲೇರುವ ದೃಶ್ಯ ಅಪೂರ್ವ. ಈ ದೃಶ್ಯವನ್ನು ಕೆಲವರು ಮೊಬೈಲ್‌ ಕೆಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದೀಗ ವೈರಲ್‌ ಆಗಿದೆ.

ಇದನ್ನೂ ಓದಿ : ಮಹಾರಾಷ್ಟ್ರ : ಮಕ್ಕಳ ಕಳ್ಳರೆಂದು ಭಾವಿಸಿ ಸಾಧುಗಳಿಗೆ ಹಿಗ್ಗಾಮುಗ್ಗಾ ಥಳಿತ! ವಿಡಿಯೋ ವೈರಲ್

Advertisement

Udayavani is now on Telegram. Click here to join our channel and stay updated with the latest news.

Next