ಕುಷ್ಟಗಿ: ಸಿಡಿಲಿನ ಅಪಘಾತಕ್ಕೆ ಎತ್ತು ಬಲಿಯಾದ ಘಟನೆ ತಾಲೂಕಿನ ನೀರಲೂಟಿ ಗ್ರಾಮದಲ್ಲಿ ಮಂಗಳವಾರ (ಜೂನ್.14ರ) ರಾತ್ರಿ ಸಂಭವಿಸಿದೆ.
Advertisement
ಗ್ರಾಮದ ಸಣ್ಣಪ್ಪ ಮುದಕಪ್ಪ ಚಳ್ಳಾರಿ ಅವರಿಗೆ ಸೇರಿದ ಎತ್ತು ಇದಾಗಿದ್ದು, ಜಮೀನಿನ ಮರದ ಬುಡಕ್ಕೆ ಜೋಡೆತ್ತುಗಳನ್ನು ಕಟ್ಟಿದ್ದರು.
ಮಳೆ ನಿಂತ ಬಳಿಕ ಜಮೀನಿಗೆ ಹೋಗಿದ್ದಾಗ ಎತ್ತು ಸತ್ತು ಬಿದ್ದಿತ್ತು. ಪಕ್ಕದಲ್ಲೇ ಇದ್ದ ಇನ್ನೊಂದು ಎತ್ತಿಗೆ ಏನೂ ಆಗದೇ ಅಪಾಯದಿಂದ ಪಾರಾಗಿದೆ. ಮೃತಪಟ್ಟ ಎತ್ತಿನ ಮೌಲ್ಯ 65 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ಕಂದಾಯ, ಪಶು ಆಸ್ಪತ್ರೆ ಹಾಗೂ ಪೊಲೀಸರು ಆಗಮಿಸಿ ಪರಿಶೀಲಿಸಿದರು.