ರಾಮನಗರ: ರಾಮನಗರದಲ್ಲಿ ಗುಡುಗು ಸಿಡಿಲು ಸಹಿತ ಜೋರಾದ ಮಳೆಯಾದ ಪರಿಣಾಮ ಸಿಡಿಲಿನ ಹೊಡೆತಕ್ಕೆ ನಾಲ್ಕು ಮೇಕೆಗಳು ಸಾವನ್ನಪ್ಪಿದ್ದು ಮೂರು ಮಂದಿ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.
ರಾಮನಗರ ತಾಲೂಕಿನ ಅಣ್ಣಹಳ್ಳಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು ಕುರಿ ಮೇಯಿಸಲು ಹೋಗಿ ವಾಪಸು ಬರುವ ವೇಳೆ ಗುಡುಗು ಸಿಡಿಲು ಸಹಿತ ಮಳೆ ಸುರಿದಿದೆ ಈ ವೇಳೆ ಸಿಡಿಲು ಬಡಿದು ನಾಲ್ಕು ಮೇಕೆಗಳು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂವರು ಕುರಿಗಾಹಿಗಳು ಗಾಯಗೊಂಡಿದ್ದಾರೆ.
ಕುರಿಗಾಹಿಗಳಾದ ಲಿಂಗಯ್ಯ, ನರಸಿಂಹಯ್ಯ, ನಾಗೇಂದ್ರಗೆ ಸಣ್ಣಪುಟ್ಟ ಗಾಯಗಳಾಗಿದ್ದು ಗಾಯಾಳುಗಳನ್ನು ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Bhatkal: ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಆದೇಶ ನೀಡುವಂತೆ ಮನವಿ