Advertisement
ತಾಲೂಕಿನ ಬಿಳಿಕೆರೆ ಹೋಬಳಿಯ ಮಂಟಿಕೊಪ್ಪಲು ಗ್ರಾಮದ ರೈತ ಹರೀಶ್(42) ಮೃತರು. ಇವರಿಗೆ ಪತ್ನಿ, ಮಕ್ಕಳಿದ್ದಾರೆ.
ಹರೀಶ್ ಶನಿವಾರ ರಾತ್ರಿ ತಮ್ಮ ಜಮೀನಿಗೆ ನೀರು ಹಾಯಿಸಲು ಹೋಗಿದ್ದಾರೆ ಈ ವೇಳೆ ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆ ಜೋರಾಗಿದ್ದರಿಂದ ಜಮೀನಿನಲ್ಲಿದ್ದ ಗುಡಿಸಲಿನ ಬಳಿ ಆಶ್ರಯ ಪಡೆದಿದ್ದರು. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಂಜೆಯಾದರೂ ಹರೀಶ್ ಮನೆಗೆ ಮರಳದಿದ್ದರಿಂದ ಜಮೀನು ಬಳಿ ನೋಡಿದಾಗ ಸಿಡಿಲಿಗೆ ಬಲಿಯಾಗಿರುವುದು ಗೊತ್ತಾಯಿದೆ. ಗ್ರಾಮಸ್ಥರು ಬಿಳಿಕೆರೆ ಠಾಣೆಗೆ ಮಾಹಿತಿ ನೀಡಿದ ಮೇರೆಗೆ ಪೊಲೀಸರು ಶವವನ್ನು ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಭಾನುವಾರ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ವಾರಸುದಾರರಿ ಮೃತದೇಹ ಒಪ್ಪಿಸಲಾಯಿತು.
Related Articles
ವಿಷಯ ತಿಳಿದ ಶಾಸಕ ಜಿ.ಡಿ.ಹರಿಶ್‌ಗೌಡ ಭೇಟಿ ನೀಡಿ ವೈಯುಕ್ತಿಕವಾಗಿ ಸಹಾಯ ಮಾಡಿ, ಪ್ರಕೃತಿ ವಿಕೋಪದಡಿ ದೊರೆಯುವ ಪರಿಹಾರದ ಜೊತೆಗೆ ಸಂಕಷ್ಟಕ್ಕೊಳಗಾಗಿರುವ ಕುಟುಂಬಕ್ಕೆ ಸೌಲಭ್ಯ ದೊರಕಿಸಿಕೊಡುವಂತೆ ತಹಸಿಲ್ದಾರ್ ಡಾ.ಅಶೋಕ್ ಅವರಿಗೆ ಸೂಚಿಸಿದರು.
Advertisement
ಈ ವೇಳೆ ಕಂದಾಯ ಇಲಾಖೆ ನಿರೀಕ್ಷಿಕ ನಂದೀಶ್ ಗ್ರಾಮಲೆಕ್ಕಿಗ ಸುಮಂತ್ ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಉದಯ್, ಮುಖಂಡರಾದ ವಾಸೇಗೌಡ, ಕೆಂಪೇಗೌಡ ಮತ್ತಿತರರಿದ್ದರು.
ಇದನ್ನೂ ಓದಿ: Kerala; ರಾಜಕೀಯ ಹುತಾತ್ಮರು..:ವಿವಾದಕ್ಕೆ ಗುರಿಯಾದ ಆರ್ಚ್‌ಬಿಷಪ್ ಹೇಳಿಕೆ