ಧಾರವಾಡ: ಇಲ್ಲಿನ ಕೆಲಗೇರಿ ಕೆರೆಯನ್ನು ಅಭಿವೃದ್ಧಿ ಪಡಿಸಲು ಪರಿಸರ ಪ್ರೇಮಿಗಳು ಕೆರೆಯ ಮಧ್ಯೆ ಸಣ್ಣ ಗುಡ್ಡಗಳನ್ನು ನಿರ್ಮಿಸಿ ಆ ಗುಡ್ಡದಲ್ಲಿ 200ಕ್ಕೂ ವಿಭಿನ್ನ ಬಗೆಯ ಪಕ್ಷಿ ಆಹಾರ ಸಸ್ಯಗಳನ್ನು ನೆಟ್ಟರು. ನಿರ್ಮಿಸಿರುವ ಐದು ಪ್ರತಿಗುಡ್ಡಗಳ ಸುತ್ತ ಇಲಾಚಿ, ಜಾರಿ, ಬೇವು, ಹುಣುಸೆ, ಬಿದುರು, ಹತ್ತಿ, ಅರಳೆ, ಪತ್ರಿ ಮುಂತಾದ ಗಿಡಗಳನ್ನು ನೆಟ್ಟು ನೀರುಣಿಸಿದರು.
ಈ ಸಂದರ್ಭದಲ್ಲಿ ಹು-ಧಾ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಮಾತನಾಡಿ, ಮೈಸೂರಿನ ರಂಗನತಿಟ್ಟು ಮಾದರಿಯಲ್ಲಿ ಕೆಲಗೇರಿ ಕೆರೆಯಲ್ಲಿ ಪಕ್ಷಿಧಾಮ ನಿರ್ಮಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳನ್ನು ಆಕರ್ಷಿಸಲು ಸಹಕಾರಿ ಆಗುವುದಲ್ಲದೇ ಧಾರವಾಡದ ನಾಗರಿಕರಿಗೂ ಸಹಿತ ಪ್ರವಾಸಿ ತಾಣವಾಗಿ ಕೈಗೆ ದೊರಕಲಿದೆ ಎಂದರು.
ಈ ಪಕ್ಷಿಧಾಮದ ಕಾರ್ಯವನ್ನು ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ಹಾಗೂ ನಿರತ ಸೇವಾ ಸಂಸ್ಥೆ ಜಂಟಿಯಾಗಿ ಕಳೆದ ಮೂರು ವರ್ಷದಿಂದ ಈ ಕಾರ್ಯವನ್ನು ಟಾಟಾ ಇಟಾಚಿ, ಕೃಷಿ ವಿಶ್ವವಿದ್ಯಾಲಯ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ ಇವರ ಸಹಕಾರದಿಂದ ಕೈಗೊಂಡಿದೆ ಎಂದು ಸಂಘ ಸಂಸ್ಥೆಗಳ ಸಹಕಾರವನ್ನು ಸ್ಮರಿಸಿದರು.
ಜಲ ಕಾಲುವೆ ಸ್ವತ್ಛತೆ: ಇದೇ ಸಂದರ್ಭದಲ್ಲಿ ಕೆಲಗೇರಿ ಕೆರೆಗೆ ನೀರು ದೊಡ್ಡ ಪ್ರಮಾಣದಲ್ಲಿ ಹರಿದುಬರುವ ತುಂಬಿದ ನಾಲವನ್ನು 5 ಕಿ.ಮೀ. ವರೆಗೆ ಜೆಸಿಬಿ ಯಂತ್ರದಿಂದ ಸ್ವತ್ಛಗೊಳಿಸಲಾಯಿತು.
ಗಿಡಗಳನ್ನು ಹಚ್ಚಲು ನಿರತ ಸೇವಾ ಸಂಸ್ಥೆ ಅಧ್ಯಕ್ಷ ಅಸ್ಲಂ ಅಭಿಯಾಳ, ಸ್ಥಳೀಯ ಕೆಲಗೇರಿ ಕೆರೆ ಅಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಎಸ್. ಪಾಟೀಲ, ನಾರಾಯಣ ಕದಂ, ಹು.ಧಾ. ನಾಗರಿಕ ಪರಿಸರ ಸಮಿತಿ ಕಾರ್ಯದರ್ಶಿ ಡಾ| ವಿಲಾಸ ಕುಲಕರ್ಣಿ, ಐ.ಎಲ್. ಪಾಟೀಲ, ಪರಿಸರ ಪ್ರೇಮಿಗಳಾದ ಮಂಜುನಾಥ ಹಿರೇಮಠ, ನಾಗಯ್ಯ ಕಡ್ಲಿ, ಕಿಡ್ಸ್ ಸಂಸ್ಥೆಯ ಅಶೋಕ ಯರಗಟ್ಟಿ, ಅರಣ್ಯ ಇಲಾಖೆಯ ಬಿ.ಎಸ್. ಬೆನಕಟ್ಟಿ, -ಸಿದ್ದರಾಮ ಇಲ್ಕೇಟ್ರಿಕ್ ಸದಸ್ಯರು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಕೆಲಗೇರಿ ಕೆರೆಯ ಅಭಿವೃದ್ಧಿಗೊಳಿಸಲು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳ ಗಮನಕ್ಕೆ ತರಲು ನಿರ್ಣಯ ಕೈಗೊಂಡರು. ಪರಿಸರ ಪ್ರೇಮಿಗಳ ನಿಸರ್ಗದ ಕಾಳಜಿಯನ್ನು ಸ್ಥಳೀಯರು, ನಾಗರಿಕರು ಮೆಚ್ಚುಗೆ ವ್ಯಕ್ತ ಪಡಿಸಿದರು.