ಕುಣಿಗಲ್: ದನ ಮೇಯಿಸಲು ಹೋಗಿದ್ದ ವೃದ್ದೆಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಬೂದಾನಹಳ್ಳಿ ಗ್ರಾಮದಲ್ಲಿ ಗುರವಾರ ಸಂಜೆ ನಡೆದಿದೆ.
ಗ್ರಾಮದ ಲಕ್ಕವ್ವ (60) ಸಿಡಿಲಿಗೆ ಬಲಿಯಾದ ಮಹಿಳೆ.
ಎಂದಿನಂತೆ ಲಕ್ಕವ್ವ ತಮ್ಮ ಜಮೀನಿನಲ್ಲಿ ದನ ಮೇಯಿಸಲು ಹೋಗಿದ್ದ ವೇಳೆ ಗಾಳಿ ಮಳೆಯಿಂದಾಗಿ ಮರದ ಕೆಳಗಡೆ ನಿಂತಿದ್ದರು, ಆದರೆ ಭಯಕರವಾದ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸ್ಥಳಕ್ಕೆ ಪಿಎಸ್‌ಐ ಚೇತನ್, ಮುಖ್ಯ ಪೇದೆ ಜೀಲಾನಿ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
ಮರ ಉರುಳಿ, ಬೈಕ್ ಜಖಂ : ಗಾಳಿ ಸಹಿತ ಮಳೆಗೆ ಮರ ಉರುಳಿ ಮರದ ಕೆಳಗೆ ನಿಲ್ಲಿಸಿದ ಬೈಕ್‌ಗಳು ಹಾನಿಗೆ ಒಳಗಾದ ಘಟನೆ ಪಟ್ಟಣದ ತಾಲೂಕು ಪಂಚಾಯ್ತಿ ಎದುರು ಗುರುವಾರ ನಡೆದಿದೆ, ಮದ್ಯಾಹ್ನ 3: 30 ರಲ್ಲಿ ಪ್ರಾರಂಭಗೊಂಡ ಗಾಳಿ ಸಹಿತ ಮಳೆಗೆ ಇಲ್ಲಿನ ಹಳೇಯ ರಾಷ್ಟ್ರೀಯ ಹೆದ್ದಾರಿ ಬಿ.ಎಂ ರಸ್ತೆಯ ತಾಲೂಕು ಪಂಚಾಯ್ತಿ ಎದುರು ಕತ್ತಿ ಮರ ಬುಡ ಸಮೇತ ಉರುಳಿ ಬಿದ್ದು ಮರದ ಕೆಳಗೆ ನಿಲ್ಲಿಸಿದ ನಾಗರಾಜು ಎಂಬುವರಿಗೆ ಸೇರಿದ ಬೈಕ್ ಸೇರಿದಂತೆ ಹಲವು ಬೈಕ್‌ಗಳು ಜಖಂ ಗೊಂಡಿವೆ. ಮಾರ್ಗದಲ್ಲಿ ನಿತ್ಯದಂತೆ ನೂರಾರು ವಾಹನಗಳು ಸಂಚರಿಸುತ್ತಿದ್ದವು ಅದೃಷ್ಟವಶತ್ ಯಾರಿಗೂ ತೊಂದರೆಯಾಗಿಲ್ಲ.