ಹಾವೇರಿ: ಹೊಲದಲ್ಲಿ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದ ವೇಳೆ ಸಿಡಿಲು ಬಡಿದು ಓರ್ವ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟು 7 ಜನ ಕೂಲಿಕಾರರು ಗಾಯಗೊಂಡ ದುರ್ಘಟನೆ ಮಂಗಳವಾರ ಸಂಜೆ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ ಹೊರವಲಯದಲ್ಲಿ ಸಂಭವಿಸಿದೆ.
ರಟ್ಟಿಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ಮಾರುತಿ ಸುಣಗಾರ ಎಂಬುವವರ ಜಮೀನಿನಲ್ಲಿ ಕೂಲಿಕಾರರರು ಬಿತ್ತನೆ ಕಾರ್ಯದಲ್ಲಿ ತೋಡಗಿದ್ದರು. ಈ ವೇಳೆ ಸಿಡಿಲು ಬಡೆದ ಪರಿಣಾಮ ಸ್ಥಳದಲ್ಲಿಯೇ ಕವಿತಾ ರಂಗಪ್ಪ ಮೂಲಿಮನಿ(30) ಮೃತಪಟ್ಟಿದ್ದು, 7 ಕೂಲಿಕಾರರು ಗಾಯಗೊಂಡಿದ್ದಾರೆ.
ಗಾಯಗೊಂಡ ಮಾರುತಿ ಸುಣಗಾರ, ರತ್ನಾ, ಶಶಿಕಲಾ ಸುಣಗಾರ, ರವೀಂದ್ರಪ್ಪ, ಸುಧಾ, ಸಾಕಮ್ಮ, ಜುಬೇದಾಬಾನು ಅವರನ್ನು ರಟ್ಟಿಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ.
ಸ್ಥಳಕ್ಕೆ ತಹಸೀಲ್ದಾರ ಅರುಣಕುಮಾರ ಕಾರಗಿ ಭೇಟಿ ನೀಡಿ ಪರಿಶೀಲಿಸಿದ್ದು, ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
ಇದನ್ನೂ ಓದಿ : ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ಆಗಮನ: ಸಿದ್ಧತೆ ಸಭೆ ನಡೆಸಿದ ಸಿಎಂ