ಬಂಟ್ವಾಳ: ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ ನಡೆಸಿ ಗರ್ಭಾವತಿಯನ್ನಾಗಿ ಮಾಡಿದ ತಂದೆ ಜೈಲು ಪಾಲಾದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆ ಎಂಬಲ್ಲಿ ನಡೆದಿದೆ.
ತುಂಬೆ ರಾಮನಿವಾಸ ನಿವಾಸಿ ವೆಂಕಟೇಶ ಕಾರಂತ ಆರೋಪಿ.
ವೆಂಕಟೇಶ ಕಾರಂತ ಅವರು ತುಂಬೆಯಲ್ಲಿ ಪುರೋಹಿತ ಕೆಲಸ ಮಾಡುತ್ತಿದ್ದು, ಮಗಳ ಮೇಲೆಯೇ ಕಳೆದ 4 ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಾಲಕಿಗೆ ವೆಂಕಟೇಶ ಕಾರಂತ ಅವರು ಮಲತಂದೆ ಸಂಬಂಧ. ಬಾಲಕಿಯ ತಂದೆ ಅಪಘಾತದಲ್ಲಿ ಮರಣ ಹೊಂದಿದ ನಂತರ ಬಾಲಕಿಯ ತಾಯಿ ಎರಡನೇ ಮದುವೆಯಾಗಿದ್ದು, ಬಾಲಕಿಯೂ ಇವರ ಜೊತೆಯಲ್ಲೇ ವಾಸವಾಗಿದ್ದಳು.
Related Articles
ಹಿಂಸಿತ ಅಪ್ರಾಪ್ತ ಬಾಲಕಿಯನ್ನು 4 ತಿಂಗಳ ಗರ್ಭವತಿ ಮಾಡಿದ ಆರೋಪದ ಮೇಲೆ ಬಾಲಕಿಯ ತಂದೆಯನ್ನು ಪೋಲಿಸರು ವಶಕ್ಕೆ ಪಡೆದುಕೊಂಡು ಜೈಲಿಗೆ ಕಳುಹಿಸಿದ್ದಾರೆ.