ಮಂಗಳೂರು: ದುಬಾೖ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೇ 8ರಂದು ಅಜ್ಮಾನ್‌ನಲ್ಲಿರುವ ತುಂಬೆ ಮೆಡಿಸಿಟಿಗೆ ಭೇಟಿ ನೀಡಿದರು.
Advertisement
ಈ ಭಾಗದಲ್ಲೇ ನಾನು ನೋಡಿರುವ ಅತ್ಯುತ್ತಮ ಖಾಸಗಿ ವೈದ್ಯಕೀಯ ವಿಶ್ವವಿದ್ಯಾನಿಲಯ ಇದಾಗಿದೆ.
ಕರ್ನಾಟಕದಿಂದ ಬಂದ, ಉದಾತ್ತ ಧ್ಯೇಯಗಳುಳ್ಳ ಡಾ| ತುಂಬೆ ಮೊಯ್ದಿನ್ ಅವರು ಯುಎಇಯಲ್ಲಿ ಸ್ಥಾಪಿಸಿರುವ ಈ ವಿ.ವಿ.ಯು ಶಿಕ್ಷಣ ಹಾಗೂ ಆರೋಗ್ಯ ಸೇವೆ ಎರಡರಲ್ಲೂ ಉತ್ಕೃಷ್ಟತೆಯ ಕೇಂದ್ರವಾಗಿದೆ ಎಂದು ಬಣ್ಣಿಸಿದ್ದಲ್ಲದೆ ಅವರ ಸಾಧನೆಗಾಗಿ ನಾನು ಹೆಮ್ಮೆ ಪಡುತ್ತೇನೆ ಎಂದರು.
ಈ ವೇಳೆ ಅವರು ವಿ.ವಿ.ಯ ವಿವಿಧ ಚಟುವಟಿಕೆಗಳನ್ನು ಪರಿಶೀಲಿಸಿದರು.