ತುಮಕೂರು: ಲಾಭವನ್ನು ಅಷ್ಟೆ ತನ್ನಗುರಿಯಾಗಿಸಿಕೊಂಡಿರುವ ಬಂಡವಾಳ ಶಾಹಿಯುತನ್ನ ನಿರ್ದಯತೆ ಹಾಗೂ ಅಮಾನವೀಯ ಮುಖಕೋವಿಡ್ ಹಿನ್ನೆಲೆ ಮತ್ತೂಂದು ಬಾರಿ ಸಾಬೀತಾಗಿದೆ.ಸಂಪತ್ತು ಸೃಷ್ಟಿಸುವ, ದುಡಿವ ಜನರನ್ನು ಲೆಕ್ಕಿಸದೆಬಂಡವಾಳ ಶಾಹಿಗಳ ಪರವಾಗಿ ಸರ್ಕಾರಕೆಲಸ ಮಾಡುತ್ತಿವೆ ಎಂದು ಸಿಐಟಿಯುನ ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಕಿಡಿಕಾರಿದರು.
ನಗರದ ಜನ ಚಳವಳಿ ಕೇಂದ್ರದಮುಂಭಾಗ ಸಿಐಟಿಯು ಜಿಲ್ಲಾ ಸಮಿತಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆಪ್ರಯುಕ್ತ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿಮಾತನಾಡಿದ ಅವರು, ಇಂದು ಕೊರೊನಾ ದಿಂದಎಲ್ಲ ಕಡೆ ಸಾವು ಹೆಚ್ಚುತ್ತಿವೆ. ಈ ಸಾವುಗಳಸರಮಾಲೆಯಲ್ಲಿ ಜನತೆಗೆ ಅಗತ್ಯವಾದ ಔಷಧ-ಲಸಿಕೆಯಲ್ಲಿ ಲಾಭದ ಲೆಕ್ಕವನ್ನು ಪ್ರಧಾನವಾಗಿರಿಸುವುದು ಖಂಡನೀಯ. ನಾಗರಿಕ ಸಮಾಜ ಈಪರಿಸ್ಥಿತಿಯನ್ನು ಮನಗಾಣಬೇಕು.
ಹಾಗಾಗಿಸರ್ವರನ್ನು ಸಮ ಭಾವ ಹಾಗೂ ಸಮಬಾಳು ನೀಡುವಸಮಾಜವಾದಿ ವ್ಯವಸ್ಥೆಯೇ ನಾಗರಿಕ ಸಮಾಜಕ್ಕೆಇರುವ ಪರ್ಯಾಯ ಎಂದು ಅಭಿಪ್ರಾಯಪಟ್ಟರು.ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆಸುಬ್ರಮಣ್ಯ ಮಾತನಾಡಿ, ದುಡಿಯುವ ಅವಕಾಶ ಇಲ್ಲದಂತೆ ಮಾಡಿದ ಮೇಲೆ ಜನರಿಗೆ ಆಹಾರ ಮತ್ತುಅಗತ್ಯತೆ ಸರ್ಕಾರ ಪೂರೈಸುವಂತೆ ಆಗ್ರಹಿಸಿದರು.
ಆದಾಯ ತೆರಿಗೆ ಪಾವತಿ ವ್ಯಾಪ್ತಿಯಿಂದಹೊರಗಿರುವ ಎಲ್ಲ ಕುಟುಂಬಕ್ಕೆ ತಿಂಗಳಿಗೆ 7,500ರೂ. ಪಾವತಿಸಬೇಕು. ಮುಂದಿನ ಆರು ತಿಂಗಳವರೆಗೆಪ್ರತಿ ವ್ಯಕ್ತಿಗೆ 10 ಕೆ.ಜಿ. ಉಚಿತ ಆಹಾರ ಧಾನ್ಯನೀಡಬೇಕು.ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಿ ಮತ್ತುನಿರ್ಧಿಷ್ಟ ಸಮಯದೊಳಗೆ ಸಾರ್ವತ್ರಿಕ ಉಚಿತವ್ಯಾಕ್ಸಿನೇಷನ್ ಅನ್ನು ಖಚಿತಪಡಿಸಿ ಎಂದರು.
ವೈದ್ಯಕೀಯ ಸೌಲಭ್ಯ ಖಚಿತಪಡಿಸಿ: ಕೋವಿಡ್‌ಉಲ್ಬಣವನ್ನು ಎದುರಿಸಲು ಸಾಕಷ್ಟು ಆಸ್ಪತ್ರೆ, ಹಾಸಿಗೆಗಳು, ಆಮ್ಲಜನಕ ಮತ್ತು ಇತರ ವೈದ್ಯಕೀಯ ಸೌಲಭ್ಯಖಚಿತಪಡಿಸಿ.ಅಗತ್ಯ ಆರೋಗ್ಯ ಸಿಬ್ಬಂದಿ ನೇಮಿಸಿಕೊಳ್ಳುವುದು ಸೇರಿದಂತೆ ಸಾರ್ವಜನಿಕ ಆರೋಗ್ಯಮೂಲ ಸೌಕರ್ಯ ಬಲಪಡಿಸಬೇಕು. ಸಾಂಕ್ರಾಮಿಕನಿರ್ವಹಣಾ ಕೆಲಸದಲ್ಲಿ ತೊಡಗಿರುವ ವೈದ್ಯರು,ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿನೌಕರರು, ಆಶಾ, ಸ್ವತ್ಛತಾ ಕಾರ್ಮಿಕರಾದ ಪೌರಕಾರ್ಮಿಕರು, ಕಸದ ಆಟೋ ಚಾಲಕರು ಮತ್ತುಸಹಾಯಕರು ರಕ್ಷಣಾತ್ಮಕ ಉಡುಗೆ, ಸಲಕರಣೆಗಳುಇತ್ಯಾದಿಗಳ ಲಭ್ಯತೆ ಖಚಿತಪಡಿಸಬೇಕು ಹಾಗೂಅವರೆಲ್ಲರಿಗೂ ಸಮಗ್ರ ವಿಮಾ ರಕ್ಷಣೆಯನ್ನುಒದಗಿಸಬೇಕು ಎಂದು ಆಗ್ರಹಿಸಿದರು.
ಕಾರ್ಮಿಕರಿಂದ ರಕ್ತದಾನ: ವಿಶ್ವ ಕಾರ್ಮಿಕ ದಿನದಅಂಗವಾಗಿ ಕಾರ್ಮಿಕರು ರಕ್ತದಾನ ಮಾಡಿದರು.ರಕ್ತದ ಅಗತ್ಯತೆ ಹೆಚ್ಚಿರುವ ಕಾರಣ ಸಿಐಟಿಯುನಹತ್ತಾರು ಕಾರ್ಮಿಕರು ಸರ್ಕಾರಿ ಬ್ಲಿಡ್ ಬ್ಯಾಂಕ್‌ಗೆತೆರಳಿ ರಕ್ತದಾನ ಮಾಡಿದರು. ಸಿಐಟಿಯು ತಾಲೂಕುಅಧ್ಯಕ್ಷ ಷಣ್ಮಖಪ್ಪ, ಕಾರ್ಯದರ್ಶಿ ರಂಗದಾಮಯ್ಯ,ಕಟ್ಟಡ ಕಾರ್ಮಿಕ ಸಂಘದ ಮಹಮದ್ ಕಲೀಲ್,ಕಸದ ಆಟೋಚಾಲಕರ ಸಂಘದ ಶಿವರಾಜು, ರಾಜಶೇಖರ್, ನಾಗರಾಜು, ಸಿದ್ದರಾಜು, ಲಕ್ಷ್ಮೀಕಾಂತ್,ಡಾ.ವೀಣಾ ಹಾಗೂ ಇತರರು ಇದ್ದರು.