Advertisement

18 ಸಾವಿರ ರೂ. ತಲುಪಿದ ಕೊಬ್ಬರಿ ಧಾರಣೆ!

07:58 PM May 28, 2021 | Team Udayavani |

ತಿಪಟೂರು: ಲಾಕ್‌ಡೌನ್‌ ಪರಿಣಾಮರೈತರು ಬೆಳೆಯುವ ತೋಟಗಾರಿಕೆ ಹಾಗೂತರಕಾರಿ, ಹೂ, ಹಣ್ಣು ಮತ್ತಿತರೆ ಬೆಳೆಗಳಬೆಲೆಯಲ್ಲಿ ಕುಸಿತ ಕಂಡಿದ್ದರೂ, ಕೊಬ್ಬರಿ ಬೆಲೆಮಾತ್ರ ಲಾಕ್‌ಡೌನ್‌ ಸಮಯದಲ್ಲಿ ದಿನೇದಿನೆ ಏರುಗತಿಯಲ್ಲೇ ಸಾಗಿದ್ದು, ಇದೀಗಕ್ವಿಂಟಲ್‌ ಕೊಬ್ಬರಿ ಬೆಲೆ 18 ಸಾವಿರ ರೂ.ಮುಟ್ಟುವ ಮೂಲಕ ತೆಂಗು ಬೆಳೆಗಾರರಮುಖದಲ್ಲಿ ಮಂದಹಾಸ ಮೂಡಿಸಿದೆ.

Advertisement

ಒಂದು ಕಾಲದಲ್ಲಿ ಕೊಬ್ಬರಿ ಬೆಲೆಯನ್ನುಚಿನ್ನದ ಬೆಲೆಗೆ ಹೋಲಿಸಲಾಗುತ್ತಿತ್ತು. ಅಂದರೆತಿಪಟೂರಿನಲ್ಲಿ ಆಗಿನ ಕಾಲದಲ್ಲಿ 1 ಕ್ವಿಂಟಲ್‌ಕೊಬ್ಬರಿ ಮಾರಿ 1 ತೊಲಿ ಚಿನ್ನ ಖರೀದಿಸಲಾಗುತ್ತಿತ್ತು ಅನ್ನೋ ಮಾತು ಈಗಲೂ ಚಾಲ್ತಿಯಲ್ಲಿದೆ. ಆದರೆ, ಬರುಬರುತ್ತಾ ಕೊಬ್ಬರಿಬೆಲೆಗೂ ಚಿನ್ನದ ಬೆಲೆಗೂ ಅಜಗಜಾಂತರ ವ್ಯತ್ಯಾಸವಾಗಿ ರೈತರು ಮತ್ತೆ ಕೊಬ್ಬರಿಗೆ ಚಿನ್ನದಬೆಲೆ ಯಾವಾಗ ಬರುತ್ತದೆ ಎಂಬ ಚರ್ಚೆಯಲ್ಲೇ ಸಮಾಧಾನ ಮಾಡಿಕೊಳ್ಳುತ್ತಿದ್ದರು.ಆದರೆ, ಕಳೆದ 10 ವರ್ಷದಲ್ಲಿ ಒಮ್ಮೆ ಮಾತ್ರಕೊಬ್ಬರಿ ಬೆಲೆ ಕ್ವಿಂಟಲ್‌ಗೆ 19 ಸಾವಿರ ರೂ.ದಾಟಿತ್ತು. ಅದೂ ಸಹ ಕೆಲವೇ ದಿನಗಳಲ್ಲಿಮಾತ್ರ.

ನಂತರದ ದಿನಗಳಲ್ಲಿ ಕೊಬ್ಬರಿ ಬೆಲೆಕನಿಷ್ಟ ಕ್ವಿಂಟಲ್‌ಗೆ 6 ರಿಂದ 8 ಸಾವಿರ ರೂ.ದಾಟಿ 14 ಸಾವಿರ ರೂ. ಆಸುಪಾಸಿನಲ್ಲೇಗಿರಕಿ ಹೊಡೆಯುತ್ತಿತ್ತು.ಮರದಲ್ಲಿ ತೆಂಗಿನ ಕಾಯಿಗಳಿಲ್ಲ: ಕೊಬ್ಬರಿಬೆಲೆ ಹೆಚ್ಚಾದರೂ ಅದು ಕೆಲವೇ ರೈತರಿಗೆಮಾತ್ರ ಸಿಗಲಿದೆ.

ಕಾರಣ ತಾಲೂಕಿನ ಬಹುತೇಕ ಭಾಗಗಳ ತೆಂಗಿನ ತೋಟಗಳು ನೀರಿನಅಭಾವ, ರೋಗರುಜಿನೆಗಳ ಕಾಟಗಳಿಂದಮರದಲ್ಲಿ ತೆಂಗಿನ ಕಾಯಿಗಳಿಲ್ಲ. ಆದರೆ,ಕೆರೆಕಟ್ಟೆಗಳಲ್ಲಿ ನೀರಿದ್ದು, ಅಂತರ್ಜಲ ಚೆನ್ನಾಗಿರುವ ಹಾಗೂ ಹೇಮಾವತಿ ನೀರು ಹರಿಯುವ ಕೆಲವೇ ಪ್ರದೇಶಗಳ ರೈತರ ತೋಟಗಳು ಚೆನ್ನಾಗಿ ಫ‌ಸಲು ನೀಡುತ್ತಿರುವುದರಿಂದಅವರಿಗೆ ಕೊಬ್ಬರಿ ಹಾಗೂ ತೆಂಗಿನಕಾಯಿಗೆಹೆಚ್ಚಿನ ಡಿಮ್ಯಾಂಡ್‌ ಇದೆ.

ಹಾಗಾಗಿ ಕೊಬ್ಬರಿಬೆಲೆ ಕ್ವಿಂಟಲ್‌ಗೆ 18 ಸಾವಿರ ರೂ. ದಾಟಿದರೂಹೆಚ್ಚಿನ ಬೆಳೆಗಾರರಿಗೆ ಈ ಲಾಭದಾಯಿಕ ಬೆಲೆದಕ್ಕದಿರುವುದರಿಂದ ಅದೃಷ್ಟ ಇರೋರೈತರಾದರೂ ಚೆನ್ನಾಗಿ ಬದುಕಿಕೊಳ್ಳಲಿ ಎಂದುತಮ್ಮನ್ನು ತಾವೇ ಸಮಾಧಾನಿಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next