Advertisement

ಸಚಿವರ ವಿಡಿಯೊ ಸಂವಾದ: ಗ್ರಾಪಂ ಅಧ್ಯಕ ಭಾಗಿ

08:35 PM May 27, 2021 | Team Udayavani |

ಹುಳಿಯಾರು: ಸಚಿವ ಕೆ.ಎಸ್‌.ಈಶ್ವರಪ್ಪಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೈಸೂರು ಹಾಗೂ ಬೆಂಗಳೂರುಕಂದಾಯ ವಿಭಾಗಗಳ ಗ್ರಾಪಂ ಅಧ್ಯಕ್ಷರವಿಡಿಯೊ ಸಂವಾದದ ಮೂಲಕ ಸಭೆ ನಡೆಸಿದರು.

Advertisement

ಈ ಸಭೆಯಲ್ಲಿ ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಪಂ ಅಧ್ಯಕ್ಷ ಕೆ.ಸಿ.ವಿಕಾಸ್‌ ಭಾಗವಹಿಸಿ ತಮ್ಮಸಲಹೆ ನೀಡಿದರು.ಪ್ರಮುಖವಾಗಿ ಹೋಮ್‌ ಐಸೋಲೇಷನ್‌ನಲ್ಲಿ ಇದ್ದವರ ಸಂಖ್ಯೆ ಹೆಚ್ಚಾಗುತ್ತಿದ್ದು, ಐಸೋಲೇಷನ್‌ಗೆ ಮನೆಯಲ್ಲಿ ವ್ಯವಸ್ಥೆ ಇಲ್ಲದವರನ್ನು ಕೋವಿಡ್‌ ಕೇರ್‌ಸೆಂಟರ್‌ಗೆ ಕಳುಹಿಸಲು ಸಿಸಿಸಿ ಕೇಂದ್ರಗಳನ್ನು ಹೆಚ್ಚಿಸಬೇಕು. ಸ್ಥಳೀಯವಾಗಿ ಖಾಸಗಿ ವೈದ್ಯರು ಕೋವಿಡ್‌ ಪರೀಕ್ಷೆ ಮಾಡದೇ, ಚಿಕಿತ್ಸೆ ನೀಡುತ್ತಿರುವುದರಿಂದ ಅಂತಹವರು ಗ್ರಾಮದಲ್ಲಿ ತಿರುಗಾಡಿ ಹೆಚ್ಚು ಸೋಂಕು ಹಬ್ಬಿಸುತ್ತಿದ್ದಾರೆ. ಹೀಗಾಗಿ ಸ್ಥಳೀಯ ವೈದ್ಯರು ಕೂಡ ಕೋವಿಡ್‌ ಪರೀಕ್ಷೆಯ ಬಳಿಕ ಚಿಕಿತ್ಸೆನೀಡುವಂತೆ ಸೂಚಿಸಲು ತಿಳಿಸಿದರು.

ಲಸಿಕೆ ಮೊದಲ ಡೋಸ್‌ ಹಾಕಿಸಿಕೊಂಡಿರುವವರು ಎರಡನೇ ಡೋಸ್‌ಗೆಪಕ್ಕದ ಹೋಬಳಿಯ ಪ್ರಾಥಮಿಕಆರೋಗ್ಯ ಕೇಂದ್ರಗಳಿಗೆ ತೆರಳಲು ಸಾಧ್ಯವಿರುವುದಿಲ್ಲ, ಹೀಗಾಗಿ ಗ್ರಾಪಂ ಮಟ್ಟದಲ್ಲೇ ಲಸಿಕೆ ಕೊಡಿಸುವ ವ್ಯವಸ್ಥೆಮಾಡಿದರೆ ವೃದ್ಧರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next