Advertisement

ಪಠ್ಯ ಕ್ರಮದಲಿ ಶ್ರೀಗಳ ಜೀವನ ಚರಿತ್ರೆ ಅಳವಡಿಸಿ

08:20 PM Apr 02, 2022 | Team Udayavani |

ತುಮಕೂರು: ಸಿದ್ಧಗಂಗಾ ಶ್ರೀಗಳ ಜೀವನ ಚರಿತ್ರೆಯನ್ನುಪಠ್ಯಕ್ರಮದಲ್ಲಿ ಅಳವಡಿಸುವಂತೆ ಮಾಜಿ ಮುಖ್ಯಮಂತ್ರಿಯಡಿಯೂರಪ್ಪ ಅವರು ರಾಜ್ಯ ಸರ್ಕಾರಕ್ಕೆ ಮನವಿಮಾಡಿದರು. ನಗರದ ಸಿದ್ಧಗಂಗಾ ಮಠದಲ್ಲಿಬಸವ ಭಾರತ ವೇದಿಕೆಯಲ್ಲಿ ನಡೆದ ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ115ನೇ ಜಯಂತಿ ಮತ್ತು ಗುರುವಂದನಾಸಮಾರಂಭ ದಲ್ಲಿ ಮಾತ ನಾ ಡಿದ ಅವರು,ಮುಂದಿನ ಪೀಳಿಗೆಗೆ ಶ್ರೀಗಳ ಜೀವನ ಚರಿತ್ರೆಮತ್ತು ಆದರ್ಶಗಳನ್ನು ತಿಳಿಸುವ ಮೂಲಕಅವು ಗಳನ್ನು ಮೈಗೂಡಿಸಿಕೊಳ್ಳಲು ಪಠ್ಯ ಕ್ರಮದಲ್ಲಿಅಳವಡಿಸು ವುದು ಸೂಕ್ತ.

Advertisement

ಹಾಗಾಗಿ ಈ ಬಗ್ಗೆಮುಖ್ಯಮಂತ್ರಿಗಳು ಗಮನಹರಿಸಿ ಪಠ್ಯ ಕ್ರಮದಲ್ಲಿಶ್ರೀಗಳ ಜೀವನ ಚರಿತ್ರೆ ಅಳವಡಿಸುವಂತೆಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳ ಬೇಕು ಎಂದರು.ಮಕ್ಕ ಳಿಗೆ ಭವಿ ಷ್ಯ: ಶ್ರೀಗಳು ಯಾವುದೇ ಜಾತಿಸಂಕೋಲೆಗಳಿಲ್ಲದೆ, ವರ್ಗ ವರ್ಣಗಳಿ ಲ್ಲದೆ ಎಲ್ಲರನ್ನುತಮ್ಮವರಂತೆ ಭಾವಿಸಿ ಪ್ರತಿನಿತ್ಯ 10 ಸಾವಿರಮಕ್ಕಳಿಗೆ ನಿರಂತರವಾಗಿ ಅನ್ನ, ಶಿಕ್ಷಣದಾಸೋಹ ನೀಡುವ ಮೂಲಕ ಮಕ್ಕಳಿಗೆಉತ್ತಮ ಭವಿಷ್ಯ ಕಟ್ಟಿಕೊಡುತ್ತಿದ್ದರು ಎಂದುಸ್ಮರಿಸಿದರು. ಅವರು ಹಾಕಿಕೊಟ್ಟಿರುವಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯೋಣ ಎಂದರು.

ಮಠಾಧ್ಯಕ್ಷರಾಗಿರುವ ಸಿದ್ಧಲಿಂಗಸ್ವಾಮೀಜಿ ರವರು ಲಿಂಗೈಕ್ಯ ಶ್ರೀಗಳು ತೋರಿದದಾರಿಯಲ್ಲಿ ಯಾವುದೇ ಲೋಪಬಾರದಂತೆಶ್ರೀಮಠವನ್ನು ಮುನ್ನೆಡೆಸಿ ಕೊಂಡು ಹೋಗುತ್ತಿದ್ದಾರೆಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next