Advertisement

ಓವರ್‌ ಹೆಡ್‌ ಟ್ಯಾಂಕ್‌ಗಳಿಗೆ ನೀರಿನ ಸಂಪರ್ಕ ಕಲ್ಪಿಸಿ

09:32 PM Jul 18, 2021 | Team Udayavani |

ತುಮಕೂರು: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಲ ಜೀವನ್‌ ಮಿಷನ್‌ ಯೋಜನೆಅನುಷ್ಠಾನ ಮೈಲಿಗಲ್ಲಾಗಬೇಕು. ಗ್ರಾಮಗಳ ಪ್ರತಿಮನೆ ಮನೆಗೂ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಈ ಯೋಜನೆ ಉದ್ದೇಶ ನೂರರಷ್ಟು ಯಶಸ್ವಿಗೊಳ್ಳಬೇಕು.

Advertisement

ಸಕಾಲಕ್ಕೆ ಯೋಜನಾಕಾಮಗಾರಿಗಳನ್ನುಅನುಷ್ಠಾನಕ್ಕೆ ತಂದು ಕಾಲಮಿತಿಯೊಳಗೆ ಮುಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯಇಲಾಖೆಯಿಂದ ನಡೆದ ಜಲ ಜೀವನ್‌ ಮಿಷನ್‌ಯೋಜನೆ, ಬಹುಗ್ರಾಮ ಕುಡಿಯುವ ನೀರಿನಯೋಜನೆ, ಶುದ್ಧ ಕುಡಿಯುವ ನೀರಿನ ಘಟಕಗಳಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನೀರಿನ ಮೂಲಾಧಾರದ ಮೇಲೆ ಜಲಜೀವನ್‌ ಮಿಷನ್‌ ಯೋಜನೆಯಡಿ ಗ್ರಾಮಗಳಿಗೆಕುಡಿಯುವ ನೀರು ಕಲ್ಪಿಸಲು ಸಮರ್ಪಕವಾಗಿಕಾರ್ಯ ನಿರ್ವಹಿಸಬೇಕು ಎಂದು ನಿರ್ದೇಶಿಸಿದರು.

ಮಹತ್ವಾಕಾಂಕ್ಷೆಯ ಜಲ ಜೀವನ್‌ ಮಿಷನ್‌ಯೋಜನೆಯಡಿ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣಕ್ಕೆಒತ್ತು ಕೊಡಬೇಕು. ಈಗಾಗಲೇ ಈ ಯೋಜನೆಯಡಿಕಾಮಗಾರಿ ಮುಗಿಸಿರುವ ಗ್ರಾಮಗಳಲ್ಲಿ ನೀರಿನಸಂಪರ್ಕ ಕಲ್ಪಿಸಲು ನಲ್ಲಿ ಅಳವಡಿಕೆ ಬಿಟ್ಟು ಹೋಗಿರುವ ಮನೆಗಳಿಗೆ ನಲ್ಲಿ ಸಂಪರ್ಕವನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕು. ಪ್ರಸಕ್ತ ಸಾಲಿನಲ್ಲಿ ನಲ್ಲಿ ಅಳವಡಿಕೆ ಕಾಮಗಾರಿಯನ್ನು ನಿಗದಿತಸಮಯದೊಳಗೆ ಪೂರ್ಣಗೊಳಿಸಬೇಕು ಎಂದುಸೂಚನೆ ನೀಡಿದರು

Advertisement

Udayavani is now on Telegram. Click here to join our channel and stay updated with the latest news.

Next