Advertisement

ಕುಷ್ಟಗಿ: ಅಚ್ಚರಿಯ ಬೆಳವಣಿಗೆಯಲ್ಲಿBJP ಸೇರಿದ ತುಕಾರಾಮ್ ಸುರ್ವೆ

02:08 PM Apr 24, 2023 | Team Udayavani |

ಕುಷ್ಟಗಿ: ಇಂಡಿಯನ್ ಮೂಮೆಂಟ್ ಪಾರ್ಟಿ ಅಭ್ಯರ್ಥಿ ತುಕಾರಾಮ್ ಸುರ್ವೆ ಅಚ್ಚರಿ ಬೆಳವಣಿಗೆಯಲ್ಲಿ ಸೋಮವಾರ (ಎ.24) ಬಿಜೆಪಿ ಸೇರಿದ್ದಾರೆ.

Advertisement

ಕುಷ್ಟಗಿಯ ತುಕಾರಾಮ್ ಸುರ್ವೆ ನಿವಾಸಕ್ಕೆ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಆಗಮಿಸಿ, ಅಧಿಕೃತವಾಗಿ ಬಿಜೆಪಿಗೆ ಸ್ವಾಗತಿಸಿಕೊಂಡರು.

ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಪ್ರತಿಕ್ರಿಯಿಸಿ, ಜೆಡಿಎಸ್ ಅಭ್ಯರ್ಥಿಯಾಗಬೇಕಾಗಿದ್ದ ತುಕಾರಾಮ್ ಸುರ್ವೆಗೆ ಕಡೇ ಘಳಿಗೆಯಲ್ಲಿ  ಬಿ ಫಾರ್ಮ ನೀಡದೇ ಮೋಸ ಮಾಡಿದೆ. ಇದರಿಂದ ನೊಂದು, ಇಂಡಿಯನ್ ಮೂಮೆಂಟ್ ಪಾರ್ಟಿಯಿಂದ ನಾಮಪತ್ರ ಸಲ್ಲಿಸಿದ್ದರು.ಅವರಿಗೆ ನಿಮ್ಮನ್ನು ನಂಬಿದ ಮತದಾರರಿಗೆ ನ್ಯಾಯ ಕಲ್ಪಿಸಲು ನಮ್ಮೊಂದಿಗೆ ಕೈ ಜೋಡಿಸಿ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗೋಣ ಎಂದು ಮಾಡಿದ ಮನವಿಗೆ ಸ್ಪಂದಿಸಿದ ಅವರು ಯಾವುದೇ ಷರತ್ತು ಇಲ್ಲದೇ ಬಿಜೆಪಿ ಸೇರಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಕೆ.ಮಹೇಶ, ಪ್ರಭುಶಂಕರಗೌಡ ಪಾಟೀಲ, ಚೌಡಪ್ಪ, ಸುಖಮುನಿ, ಮರಸಣ್ಣ ತಾಳದ್ ಶ್ಯಾಮೀದಸಾಬ್ ಗಂಧೆಣ್ಣಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next