Advertisement

ಪೋಸ್ಟರ್ ನಲ್ಲಿ ಕಂಡ ‘ಥಗ್ಸ್‌ ಆಫ್ ರಾಮಘಡ’

03:13 PM Dec 02, 2022 | Team Udayavani |

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ “ಥಗ್ಸ್‌ ಆಫ್ ರಾಮಘಡ’ ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಸದ್ಯ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಫ‌ಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಿದೆ. ನಿರ್ದೇಶಕ ಯೋಗರಾಜ್‌ ಭಟ್‌ “ಥಗ್ಸ್‌ ಆಫ್ ರಾಮಘಡ’ ಸಿನಿಮಾದ ಫ‌ಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

Advertisement

ಚಂದನ್‌ ರಾಜ್‌, ಅಶ್ವಿ‌ನ್‌ ಹಾಸನ್‌, ಮಹಾಲಕ್ಷ್ಮೀ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಸೂರ್ಯ ಕಿರಣ್‌, ಪ್ರಭು ಹೊಸದುರ್ಗ, ವಿಶಾಲ್‌ ಪಾಟೀಲ್, ರವಿ ಸಾಲಿಯಾನ್‌, ರಾಘವೇಂದ್ರ, ಭೀಷ್ಮ, ಲೋಕೇಶ್‌ ಗೌಡ, ಟೈಗರ್‌ ಗಂಗ ಮತ್ತಿತರರು “ಥಗ್ಸ್‌ ಆಫ್ ರಾಮಘಡ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಐಟಿ ಹಿನ್ನೆಲೆಯ ಜೊತೆಗೆ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ ಅನುಭವವಿರುವ ಕಾರ್ತಿಕ್‌ ಮಾರಲಭಾವಿ “ಥಗ್ಸ್‌ ಆಫ್ ರಾಮಘಡ’ ಸಿನಿಮಾಕ್ಕೆ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ. ಯಾದಗಿರಿ ಮೂಲದ ಕಾರ್ತಿಕ್‌, 1995ರ ಸಮಯದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಅದನ್ನು “ಥಗ್ಸ್‌ ಆಫ್ ರಾಮಘಡ’ ಸಿನಿಮಾದ ಮೂಲಕ ತೆರೆಮೇಲೆ ತರುತ್ತಿದ್ದಾರೆ.

ಕ್ರೈಂ ಕಲ್ಟ್ ಶೈಲಿಯಲ್ಲಿ ಮೂಡಿಬಂದಿರುವ “ಥಗ್ಸ್‌ ಆಫ್ ರಾಮಘಡ’ ಸಿನಿಮಾವನ್ನು ಸುರಪುರ, ವಿಜಯ ಪುರ, ಶಹಾಪುರ, ತಾಳಿಕೋಟೆ ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. “ಭಾರತ್‌ ಟಾಕೀಸ್‌’ನಡಿ ಜೈ ಕುಮಾರ್‌, ಕೀರ್ತಿರಾಜ್‌ “ಥಗ್ಸ್‌ ಆಫ್ ರಾಮಘಡ’ ಸಿನಿಮಾವನ್ನು ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next