Advertisement

ಕೊಲೆಗಡುಕರು, ಲೂಟಿಕೋರರ ರಕ್ಷಕ ಸಿದ್ದರಾಮಯ್ಯ

09:43 AM Feb 22, 2018 | |

ಉಡುಪಿ: ಪಕ್ಕದಲ್ಲೇ ಇರುವ ಕೊಲೆಗಡುಕರು, ಲೂಟಿಕೋರರನ್ನು ಬಂಧಿಸುವ ಯೋಗ್ಯತೆ ಇಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನರೇಂದ್ರ ಮೋದಿ ಅವರನ್ನು ಟೀಕಿಸುವ ನೈತಿಕ ಹಕ್ಕಿಲ್ಲ  ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

Advertisement

 ಬುಧವಾರ ಉಡುಪಿಯ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಜರಗಿದ ಉಡುಪಿ ಮತ್ತು ದ.ಕ. ಜಿಲ್ಲೆಗಳ ಬಿಜೆಪಿ ಸಾಮಾಜಿಕ ಜಾಲತಾಣಿಗರ ಸಮಾವೇಶ ಮತ್ತು ಸಂವಾದವನ್ನುದ್ದೇಶಿಸಿ ಅವರು ಮಾತನಾಡಿದರು. 

ಭೈರತಿ ಬಸವರಾಜ್‌ ಓರ್ವ ಲೂಟಿಕೋರ ಶಾಸಕ. ಅವನ ಬಂಟ ನಾರಾಯಣ ಸ್ವಾಮಿ ಸರಕಾರಿ ಕಚೇರಿ ಯಲ್ಲಿ ಪೆಟ್ರೋಲ್‌ ಹಾಕಿ ಬೆಂಕಿ ಹಚ್ಚಿದ್ದಾನೆ. ಶಾಸಕ ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌, ವಿದ್ವತ್‌ ಮೇಲೆ ಮಾರ ಣಾಂತಿಕ ಹಲ್ಲೆ ನಡೆಸಿದ್ದಾನೆ. ಲೂಟಿಕೋರರು, ಕೊಲೆ ಗಡುಕರು ತನ್ನ ಪಕ್ಕದಲ್ಲೇ ಇದ್ದರೂ ಅವರನ್ನು ಬಂಧಿಸಲು ಸಿದ್ದರಾಮಯ್ಯ ಅವರಿಂದ ಸಾಧ್ಯವಾಗಿಲ್ಲ. ಆದರೆ ಅವರು “ನಾನು ಪ್ರಧಾನಿಯಾಗಿದ್ದರೆ ನೀರವ್‌ ಮೋದಿ ಯನ್ನು ಓಡಿ ಹೋಗಲು ಬಿಡುತ್ತಿರಲಿಲ್ಲ’ ಎಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರಿಗೆ ನಾಚಿಕೆ ಯಾಗಬೇಕು. ಅವರದ್ದು ತಿರುಕನ ಕನಸು. ಅವರ ನಡತೆ ಎಷ್ಟು ಸಣ್ಣ ಮಟ್ಟದ್ದು ಎಂಬ ಅರಿವು ಕೂಡ ಅವರಿಗಿಲ್ಲ. ಇಡೀ ಪ್ರಪಂಚವೇ ನರೇಂದ್ರ ಮೋದಿಯವರ ಸಾಧನೆಯನ್ನು ಅಚ್ಚರಿಯಿಂದ ನೋಡುತ್ತಿದೆ ಎಂದು ಯಡಿಯೂರಪ್ಪ  ಹೇಳಿದರು.

ದೇಶ ಕಂಡ ಭ್ರಷ್ಟ ಸಿಎಂ
ಸಿದ್ದರಾಮಯ್ಯ ದೇಶ ಕಂಡ ಭ್ರಷ್ಟ ಮುಖ್ಯಮಂತ್ರಿ. ಇದು ಜನರಿಗೆ ಗೊತ್ತಿದೆ. ಜನ ಸಿದ್ದರಾಮಯ್ಯ ಅವರಿಗೆ ಶಾಪ ಹಾಕುತ್ತಿದ್ದಾರೆ. ನಾನು 85 ದಿನಗಳ ಕಾಲ 224 ಕ್ಷೇತ್ರಗಳಿಗೆ ಪ್ರವಾಸ ಮಾಡಿದ ಸಂದರ್ಭದಲ್ಲಿ ಜನರ ನಾಡಿ ಮಿಡಿತ ಅರಿತುಕೊಂಡಿದ್ದೇನೆ. ಬಿಜೆಪಿ ಅಧಿಕಾರಕ್ಕೆ ಬರುವ ಪೂರ್ಣ ವಿಶ್ವಾಸವಿದೆ. ಮೋದಿಯವರ ಉತ್ತಮ ಕೆಲಸಗಳು, ಅಮಿತ್‌ ಶಾ ಅವರ ಮಾರ್ಗದರ್ಶನದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದರು. 

ರಾಹುಲ್‌ ಬಂದಷ್ಟೂ  ಬಿಜೆಪಿಗೆ ಲಾಭ 
“ಬಚ್ಚಾ… ನಿಮ್ಮ ರಾಹುಲ್‌ ಗಾಂಧಿಯನ್ನು ಕರೆದು ಕೊಂಡು ಬಂದಿದ್ದೀರಿ. ಈಗ ನಿಮಗೆ ಹಿಂದೂಗಳು, ದೇವಸ್ಥಾನಗಳ ನೆನಪಾಯಿತು. ಇದು ಜನರಿಗೆ ಗೊತ್ತಿದೆ. ರಾಹುಲ್‌ ಗಾಂಧಿ ಬಂದಷ್ಟು ಹೆಚ್ಚು ಹೆಚ್ಚು ಸ್ಥಾನ ಬಿಜೆಪಿಗೆ ದೊರೆಯಲಿದೆ. ರಾಹುಲ್‌ ಇಲ್ಲೇ ಕ್ಯಾಂಪ್‌ ಮಾಡಲಿ. ಸೊಕ್ಕು, ಧಿಮಾಕಿನಿಂದ ಮಾತನಾಡಬೇಡಿ. ನಿಮ್ಮ ಕಾಲ ಮುಗಿಯುತ್ತಿದೆ. ಎರಡು ತಿಂಗಳು ಮಾತ್ರ ಇದೆ’ ಎಂದು ಯಡಿಯೂರಪ್ಪ  ಗುಡುಗಿದರು.

Advertisement

ಹೋರಾಟ ಹಿನ್ನೆಲೆಯ ಪಕ್ಷ 
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತು ವಾರಿ ಮುರಳೀಧರ ರಾವ್‌ ಮಾತನಾಡಿ, ದೇಶದ ಯುವಕರು ಮೋದಿ ಜತೆ ಇದ್ದಾರೆ. ಈ ದೇಶದ ಪ್ರಜಾ ತಂತ್ರ, ಸಾರ್ವಭೌಮತೆಯ ಉಳಿವಿಗಾಗಿ ಬಿಜೆಪಿ ಆಂದೋ ಲನಗಳನ್ನು ನಡೆಸುತ್ತಾ ಬಂದಿದೆ. ಜಾತಿ, ಧರ್ಮಗಳನ್ನು ಮೀರಿ ಒಂದೇ ದೇಶ ಎಂಬ ಪರಿಕಲ್ಪನೆಯಡಿ ಹೋರಾಟ ನಡೆಸುತ್ತಿದೆ. ಕರ್ನಾಟಕದಲ್ಲಿಯೂ ಪ್ರಜಾಪ್ರಭುತ್ವ ಉಳಿಸಿ,ಕರ್ನಾಟಕದ ಜನತೆಯನ್ನು ಉಳಿಸಿ ಎಂಬ ಘೋಷಣೆ ಯೊಂದಿಗೆ ಚುನಾವಣೆಗೆ ಧುಮುಕಿದೆ ಎಂದರು.

ಸಂಸದರಾದ ನಳಿನ್‌ ಕುಮಾರ್‌ ಕಟೀಲು, ಶೋಭಾ ಕರಂದ್ಲಾಜೆ, ಶಾಸಕರಾದ ಸಿ.ಟಿ.ರವಿ, ಸುನಿಲ್‌ ಕುಮಾರ್‌, ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಮಂಗಳೂರು ವಿಭಾಗದ ಪ್ರಭಾರಿ ಕೆ. ಉದಯ ಕುಮಾರ್‌ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದ.ಕ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಬಿಜೆಪಿ ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ದ.ಕ. ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಹರೀಶ್‌ ಪೂಂಜಾ, ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಪ್ರಕೋಷ್ಠ ಸಂಚಾಲಕ ಬಾಲಾಜಿ ಶ್ರೀನಿವಾಸ್‌, ಪ್ರಕೋಷ್ಠದ ಉಡುಪಿ ಜಿಲ್ಲಾ ಸಂಚಾಲಕ ಅಕ್ಷಯ್‌ ಶೆಟ್ಟಿ ಉಪಸ್ಥಿತರಿದ್ದರು. 

ಸಮಾವೇಶದ ಉಸ್ತುವಾರಿ ಕುಯಿಲಾಡಿ ಸುರೇಶ್‌ ನಾಯಕ್‌ ಸ್ವಾಗತಿಸಿದರು. ಶ್ರೀಶ ನಾಯಕ್‌ ವಂದಿಸಿದರು. ಗಿರೀಶ್‌ ಅಂಚನ್‌ ಕಾರ್ಯಕ್ರಮ ನಿರ್ವಹಿಸಿದರು.

ಆನ್‌ಲೈನ್‌ ಯುದ್ಧಕ್ಕೆ “ಡಿಜಿಟಲ್‌ ವಾರಿಯರ್’
ಇದು ಮಾಹಿತಿ ತಂತ್ರಜ್ಞಾನ ಯುಗ. ಸಾಮಾಜಿಕ ಜಾಲ ತಾಣ ಗಳು ಅತ್ಯಂತ ಪ್ರಭಾವಶಾಲಿಯಾಗಿವೆ. ಸಾರ್ವ ಜನಿಕ ಅಭಿಪ್ರಾಯ ರೂಪಿಸುವಲ್ಲಿ ಇವುಗಳ ಪಾತ್ರ ಪ್ರಮುಖ ವಾದುದು. ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌ ಮೊದ ಲಾದ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಬಿಜೆಪಿ ಮುಂದೆ ಇದೆ. ಚುನಾವಣೆ ಭೌತಿಕ ಯುದ್ಧ ಮಾತ್ರವಲ್ಲ, ಆನ್‌ಲೈನ್‌ ಯುದ್ಧ ಕೂಡ ಆಗಿದೆ. ನರೇಂದ್ರ ಮೋದಿಯವರು ಚುನಾವಣೆ ಸಂದರ್ಭ ಹಾಗೂ ಸರಕಾರದ ಕಾರ್ಯಕ್ರಮ ಜನರಿಗೆ ತಲುಪಿಸಲು ಇದನ್ನು ಪರಿಣಾಮಕಾರಿಯಾಗಿ ಬಳಸಿ ಕೊಂಡಿ ದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕೂಡ ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಾಗಿದೆ. ಈ ಯುದ್ಧದಲ್ಲಿ ಬಿಜೆಪಿಯ ಡಿಜಿಟಲ್‌ ಪಡೆ ಸಂಪೂರ್ಣವಾಗಿ ತೊಡಗಿಸಿ ಕೊಳ್ಳ ಬೇಕು. ಅಂತೆಯೇ ಸಾಮಾಜಿಕ ಜಾಲತಾಣಗಳನ್ನು ಎಚ್ಚರಿಕೆ ಯಿಂದ ಬಳಕೆ ಮಾಡಬೇಕು. ಪಕ್ಷದ ಘನತೆಗೆ ಯಾವುದೇ ಕುಂದುಂಟಾಗಬಾರದು ಎಂದು ಯಡಿಯೂರಪ್ಪ ಹೇಳಿದರು.

ವಿಶೇಷ ಕರತಾಡನ 
ಯಡಿಯೂರಪ್ಪ ತನ್ನ ಮಾತುಗಳಿಂದ ನೆರೆದಿದ್ದ ಕಾರ್ಯಕರ್ತ ರಲ್ಲಿ ಉತ್ಸಾಹ ಮೂಡಿಸಿದರು. ಉಡುಪಿ-ದ.ಕ. ಕಾರ್ಯಕರ್ತರು ದೇವದುರ್ಲಭ ಕಾರ್ಯಕರ್ತರು. ಇವರು ಇತರ ಕಾರ್ಯಕರ್ತರಿಗೂ ಮಾರ್ಗದರ್ಶಕರು. 2 ತಿಂಗಳ ಕಾಲ ಪಕ್ಷಕ್ಕಾಗಿ ಸಮಯ ಮೀಸಲಿಟ್ಟು ಕರಾವಳಿಯ ಎಲ್ಲ ಸ್ಥಾನಗಳನ್ನು ಬಿಜೆಪಿ ಗೆಲ್ಲುವಂತೆ ಮಾಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಸಂತೋಷ್‌ ಅವರು ಯಡಿಯೂರಪ್ಪ  ಮಾತಿಗೆ ಮತ್ತೂಮ್ಮೆ ವಿಶೇಷ ಕರತಾಡನ ಮಾಡುವಂತೆ ಕೋರಿದರು. ಆಗ ಮತ್ತೂಮ್ಮೆ ಕರತಾಡನವಾಯಿತು. 

ಮುಚ್ಚಿದ ಸಭಾಂಗಣದಲ್ಲಿ  ಶಾ ಪಾಠ
ಕಾರ್ಯಕ್ರಮವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಉದ್ಘಾಟಿಸಿದ ಅನಂತರ ವೆಬ್‌ಸೈಟ್‌ನ್ನು ಅನಾ  ವರಣ ಗೊಳಿಸಿದರು. ಈ ಸಂದರ್ಭದಲ್ಲಿ ಮಾಧ್ಯಮ ದವ ರನ್ನು ಸಭಾಂಗಣದಿಂದ ಹೊರಗೆ ಹೋಗುವಂತೆ ವಿನಂತಿಸ ಲಾಯಿತು. ಮುಚ್ಚಿದ ಬಾಗಿಲುಗಳ ಸಭಾಂಗಣದಲ್ಲಿ ಅಮಿತ್‌ ಶಾ ಅವರು ಸಾಮಾಜಿಕ ಜಾಲತಾಣಿಗರನ್ನುದ್ದೇಶಿಸಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next