Advertisement

‘Thug Lifeʼನಲ್ಲಿ ʼಶಕ್ತಿವೇಲುʼ ಆಗಿ ಮಿಂಚಿದ ʼನಾಯಕನ್‌ʼ: ಮಣಿರತ್ನಂ ಸಿನಿಮಾದ ಟೈಟಲ್‌ ಔಟ್

11:04 AM Nov 07, 2023 | Team Udayavani |

ಚೆನ್ನೈ: ಕಮಲ್‌ ಹಾಸನ್‌ – ಮಣಿರತ್ನಂ ಕಾಂಬಿನೇಷನ್‌ ಬಹು ನಿರೀಕ್ಷಿತ ಬಿಗ್ ಬಜೆಟ್‌ ಸಿನಿಮಾದ ಟೈಟಲ್ ರಿವೀಲ್ ಆಗಿದ್ದು, ʼನಾಯಕನ್‌ʼ ಡಿಫ್ರೆಂಟ್‌ ಲುಕ್‌ ಸಿನಿವಲಯದಲ್ಲಿ ವೈರಲ್‌ ಆಗಿದೆ.

Advertisement

35 ವರ್ಷದ ಬಳಿಕ ಕಮಲ್‌ ಹಾಸನ್‌ – ಮಣಿರತ್ನಂ ಜೊತೆಯಾಗುತ್ತಿದ್ದಾರೆ. ಈ ಸಿನಿಮಾಕ್ಕೆ ʼಥಗ್‌ ಲೈಫ್‌ʼ ಎಂದು ಟೈಟಲ್‌ ಇಡಲಾಗಿದೆ. ಸಿನಿಮಾದ ಟೈಟಲ್‌ ನ್ನು ಅನೌನ್ಸ್‌ ಮೆಂಟ್‌ ವಿಡಿಯೋವೊಂದನ್ನು ರಿಲೀಸ್‌ ಮಾಡಿ ರಿವೀಲ್‌ ಮಾಡಲಾಗಿದೆ. ಈ ಮೊದಲು ಸಿನಿಮಾಕ್ಕೆ ತಾತ್ಕಾಲಿಕವಾಗಿ “KH234” ಎಂದು ಟೈಟರ್‌ ಇಡಲಾಗಿತ್ತು.

ಯುದ್ದಭೂಮಿಯೊಂದರಲ್ಲಿ ಶತ್ರುಗಳನ್ನು ಸಂಹಾರ ಮಾಡುವ ಮಾಸ್‌ ಅವತಾರದಲ್ಲಿ ಕಮಲ್‌ ಹಾಸನ್‌ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿರುವ ಒಂದೊಂದು ದೃಶ್ಯ, ಒಂದೊಂದು ಡೈಲಾಗ್‌ ಗಳು ಛಾಯಗ್ರಹಣದ ಶ್ರೀಮಂತಿಕೆಯನ್ನು ಎದ್ದು ತೋರಿಸುತ್ತದೆ. ಕಮಲ್‌ ಹಾಸನ್‌ ವೃತ್ತಿ ಜೀವನದಲ್ಲಿ ಇದೊಂದು ವಿಭಿನ್ನ ಕಥಾಹಂದರದ ಸಿನಿಮಾವಾಗಿರಲಿದೆ ಎಂದು ಫ್ಯಾನ್ಸ್‌ ಗಳು ಹೇಳುತ್ತಿದ್ದಾರೆ

ವಿಶೇಷವೆಂದರೆ ಇಲ್ಲಿ ʼನಾಯಕನ್‌ʼ ಸಿನಿಮಾದಲ್ಲಿನ ʼಶಕ್ತಿವೇಲು ನೈಚರ್‌ʼ ಪಾತ್ರದಲ್ಲೇ ಕಮಲ್‌ ಹಾಸನ್‌ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿನ ಪಾತ್ರಕ್ಕೂ ನಾಯಕನ್‌ ಪಾತ್ರಕ್ಕೂ ಏನೋ ಒಂದು ಕನೆಕ್ಷನ್‌ ಇದೆ ಎಂದು ಫ್ಯಾನ್ಸ್‌ ಗಳ ಗಾಸಿಪ್.

ಜಯಂ ರವಿ, ದುಲ್ಕರ್ ಸಲ್ಮಾನ್ ಮತ್ತು ತ್ರಿಶಾ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

ಕಮಲ್ ಹಾಸನ್, ಮಣಿರತ್ನಂ, ಆರ್.ಮಹೇಂದ್ರನ್ ಮತ್ತು ಶಿವ ಅನಂತ್ ಅವರು ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್, ಮದ್ರಾಸ್ ಟಾಕೀಸ್ ಮತ್ತು ರೆಡ್ ಜೈಂಟ್ ಮೂವೀಸ್ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಿಸಿದ್ದಾರೆ.‌ ಎ.ಆರ್.‌ ರೆಹಮಾನ್‌ ಅವರು ಸಿನಿಮಾಕ್ಕೆ ಮ್ಯೂಸಿಕ್‌ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next