Advertisement

ಥ್ರೋಬಾಲ್ ಪಂದ್ಯ: ಹುಣಸೂರು ಮಹಿಳಾ ಕಾಲೇಜು ತಂಡಕ್ಕೆ ಜಯ

09:49 AM Aug 03, 2022 | Team Udayavani |

ಹುಣಸೂರು: ಮೈಸೂರು ವಿ.ವಿ.ಯ ಕೃಷ್ಣರಾಜ ವಲಯ ಮಟ್ಟದ ಮಹಿಳಾ ಥ್ರೋಬಾಲ್ ಪಂದ್ಯಾಟದಲ್ಲಿ ಹುಣಸೂರು ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಹಾಗೂ ಹುಣಸೂರಿನ ಸಂತ ಜೋಸೆಫರ ಪದವಿ ಕಾಲೇಜು ತಂಡ ದ್ವಿತೀಯ ಸ್ಥಾನ ಗಳಿಸಿ ಎರಡೂ ತಂಡಗಳು ವಿ.ವಿ.ಯ ಅಂತರ್ ಕಾಲೇಜು ಸ್ಪರ್ಧೆಗೆ ಆಯ್ಕೆಯಾಗಿವೆ.

Advertisement

ಹುಣಸೂರು ಮಹಿಳಾ ಕಾಲೇಜಿನ ಆತಿಥ್ಯದಲ್ಲಿ ನಡೆದ ಅಂತಿಮ ಪಂದ್ಯಾಟದಲ್ಲಿ ಸಂತ ಜೋಸೆಫರ ಕಾಲೇಜು ತಂಡವನ್ನು 2-1 ಸೆಟ್‌ಗಳ ಮೂಲಕ ಹುಣಸೂರು ಮಹಿಳಾ ತಂಡ ಸೋಲಿಸಿತು.

ಕೊನೆ ಸೆಟ್‌ನಲ್ಲಿ 26-24 ಅಂಕಗಳಿಂದ ಮಹಿಳಾ ಕಾಲೇಜು ತಂಡ ಜಯ ಗಳಿಸಿತು. ಪಿರಿಯಾಪಟ್ಟಣ ತಾಲೂಕು ಕೊಪ್ಪದ ಭಾರತ್ ಮಾತಾ ಪ್ರಥಮ ದರ್ಜೆ ಕಾಲೇಜು ತಂಡ ತೃತೀಯ ಸ್ಥಾನಕ್ಕೆ ಪಡೆಯಿತು.

ಸೋಮವಾರ ಸುರಿದ ಮಳೆಯ ಕಾರಣ ಅಂತಿಮ ಪಂದ್ಯ ರದ್ದುಪಡಿಸಿ ಮಂಗಳವಾರ ನಡೆಸಲಾಯಿತು. ಹುಣಸೂರು ಮಹಿಳಾ ಕಾಲೇಜು ತಂಡ ಗೆಲ್ಲುತ್ತಿದ್ದಂತೆ ನೆರೆದಿದ್ದ ಕಾಲೇಜು ವಿದ್ಯಾರ್ಥಿನಿಯರು ತಂಡದ ಆಟಗಾರರನ್ನು ವೇಲೆತ್ತಿಕೊಂಡು ಕುಣಿದು ಕುಪ್ಪಳಿಸಿದರು.

ಟ್ರೋಫಿ ವಿತರಣೆ: ರೋಟರಿ ಸಂಸ್ಥೆ ಅಧ್ಯಕ್ಷ ಪಾಂಡು ಕುಮಾರ್ ಕೊಡುಗೆಯಾಗಿ ನೀಡಿದ್ದ ಟ್ರೋಫಿಯನ್ನು ವಿಜೇತ ತಂಡಗಳಿಗೆ ಕಾಲೇಜಿನ ಪ್ರಾಂಶುಪಾಲ ಜ್ಞಾನಪ್ರಕಾಶ್, ಸಿಡಿಸಿ ಉಪಾಧ್ಯಕ್ಷ ಹನಗೋಡು ನಟರಾಜ್, ಸದಸ್ಯ ನಾಗರಾಜ್, ಅಧ್ಯಾಪಕ ಪುಟ್ಟಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕೆ. ಎಸ್. ಭಾಸ್ಕರ್ ವಿತರಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next