Advertisement

ಇಂದು ‘ತ್ರಿವಿಕ್ರಮ’ಪ್ರಿ-ರಿಲೀಸ್‌ ಇವೆಂಟ್‌: ಸ್ಯಾಂಡಲ್‌ವುಡ್‌ ನಟ-ನಟಿಯರು ಭಾಗಿ

10:33 AM Jun 19, 2022 | Team Udayavani |

ರವಿಚಂದ್ರನ್‌ ಪುತ್ರ ವಿಕ್ರಮ್‌ ನಾಯಕರಾಗಿರುವ ಚೊಚ್ಚಲ ಚಿತ್ರ “ತ್ರಿವಿಕ್ರಮ’ ಜೂ.24ರಂದು ತೆರೆಕಾಣುತ್ತಿದೆ. ಮೊದಲ ಹಂತವಾಗಿ ಚಿತ್ರದ ಪ್ರೀ ರಿಲೀಸ್‌ ಕಾರ್ಯಕ್ರಮ ಇಂದು ನಡೆಯುತ್ತಿದ್ದು, ಚಿತ್ರದ ಟ್ರೇಲರ್‌ ಕೂಡಾ ಬಿಡುಗಡೆಯಾಗಲಿದೆ. ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Advertisement

ನಟರಾದ ರವಿಚಂದ್ರನ್‌, ಶಿವರಾಜ್‌ಕುಮಾರ್‌, “ಡಾಲಿ’ ಧನಂಜಯ್‌, ನಿರ್ದೇಶಕ ಪ್ರೇಮ್, ರಕ್ಷಿತಾ ಪ್ರೇಮ್, ಶರಣ್‌, ನೀನಾಸಂ ಸತೀಶ್‌, ಲೂಸ್‌ ಮಾದ ಯೋಗಿ, ಅಜೇಯ್‌ ರಾವ್‌, ಡಾರ್ಲಿಂಗ್‌ ಕೃಷ್ಣ, ತಾರಾ, ಶೃತಿ, ವಸಿಷ್ಠ ಸಿಂಹ, ನಿಶ್ವಿ‌ಕಾ ನಾಯ್ಡು ಹಾಗೂ ಮನುರಂಜನ್‌ ಸೇರಿದಂತೆ ಇನ್ನೂ ಅನೇಕರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ಈಗಾಗಲೇ ಹಾಡುಗಳ ಮೂಲಕ ಸದ್ದು ಮಾಡಿರುವ “ತ್ರಿವಿಕ್ರಮ’ ಟೀಂ, ಟ್ರೇಲರ್‌ ಮೂಲಕ ಸೌಂಡು ಮಾಡಲು ಸಜ್ಜಾಗಿದೆ. ಅದ್ಧೂರಿ ಕಾರ್ಯಕ್ರಮದಲ್ಲಿ “ತ್ರಿವಿಕ್ರಮ’ ಟ್ರೇಲರ್‌ ಬಿಡುಗಡೆ ಮಾಡಲಿದೆ ಚಿತ್ರತಂಡ.

ಸಹನಾ ಮೂರ್ತಿ “ತ್ರಿವಿಕ್ರಮ’ನಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.  ಸೋಮಣ್ಣ ಟಾಕೀಸ್‌ ಬ್ಯಾನರ್‌ ಅಡಿಯಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ರಾಮ್ಕೋ ಸೋಮಣ್ಣ ಬಂಡವಾಳ ಹೂಡಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ಚಿತ್ರದಲ್ಲಿ ತುಳಸಿ, ಸುಚೇಂದ್ರ ಪ್ರಸಾದ್‌, ಸಾಧುಕೋಕಿಲ, ರೋಹಿತ್‌ ರಾಯ್, ಜಯಪ್ರಕಾಶ್‌, ಶಿವಮಣಿ, ಆದಿ ಲೋಕೇಶ್‌, ನಾಗೇಂದ್ರ ಶಾ, ಚಿಕ್ಕಣ್ಣ ಮೊದಲಾದವರು ತಾರಾಗಣದಲ್ಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next