Advertisement

ಗೇಮ್‌ ಆಡುತ್ತಿರುವಾಗ ಮೊಬೈಲ್‌ ಸ್ಫೋಟಗೊಂಡು 8 ವರ್ಷದ ಬಾಲಕಿ ಮೃತ್ಯು

02:12 PM Apr 25, 2023 | Team Udayavani |

ತ್ರಿಶೂರ್:‌ ಮೊಬೈಲ್‌ ಗೇಮ್‌ ಆಡುತ್ತಿರುವಾಗ  ಮೊಬೈಲ್‌ ಸ್ಫೋಟಗೊಂಡು ಬಾಲಕಿಯೊಬ್ಬಳು ಮೃತಪಟ್ಟಿರುವ ದುರಂತ ಘಟನೆ ತ್ರಿಶೂರ್ ನ ತಿರುವಿಲ್ವಾಮಲ ನಡೆದಿರುವುದು ವರದಿಯಾಗಿದೆ.

Advertisement

ಪಟ್ಟಿಪರಂಬುವಿನ ಆದಿತ್ಯಶ್ರೀ (8) ಮೃತ ಬಾಲಕಿ.

ಸೋಮವಾರ (ಎ.24 ರಂದು) ರಾತ್ರಿ 10:30 ರ ವೇಳೆಗೆ ಬಾಲಕಿ ಆದಿತ್ಯಶ್ರೀ ಮೊಬೈಲ್‌ ನಲ್ಲಿ ಗೇಮ್‌ ಆಡುತ್ತಿರುವಾಗ ಮೊಬೈಲ್‌ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಮುಖ,ಕೈಗೆ ಗಂಭೀರ ಗಾಯಗೊಂಡ ಪರಿಣಾಮ ಮೃತಪಟ್ಟಿದ್ದಾಳೆ.

ಮೊಬೈಲ್‌ ನಲ್ಲಿ ಗೇಮ್‌ ಹಾಗೂ ವಿಡಿಯೋವನ್ನು ಹೆಚ್ಚಿನ ಸಮಯದಿಂದ ನೋಡುತ್ತಿದ್ದ ಪರಿಣಾಮ ಮೊಬೈಲ್‌ ನ ಬ್ಯಾಟರಿ ಬಿಸಿಯಾಗಿದೆ ಇದರಿಂದ ಮೊಬೈಲ್‌ ಸ್ಫೋಟಿಸಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

ಮೂರು ವರ್ಷದ ಹಿಂದೆ ಮೊಬೈಲ್‌ ಫೋನನ್ನು ಖರೀದಿಸಲಾಗಿತ್ತು. ಕಳೆದ ವರ್ಷವಷ್ಟೇ ಮೊಬೈಲ್‌ ಗೆ ಹೊಸ ಬ್ಯಾಟರಿಯನ್ನು ಹಾಕಲಾಗಿತ್ತು. ಘಟನೆ ನಡೆಯುವಾಗ ಆದಿತ್ಯಶ್ರೀ ಅಜ್ಜಿಯೊಂದಿಗೆ ಇದ್ದರು. ಅಜ್ಜಿ ಅಡುಗೆ ಕೋಣೆಗೆ ಹೋಗುವಾಗ ಈ ಘಟನೆ ನಡೆದಿದೆ ಎಂದು ತಿಳಿದು ವರದಿ ತಿಳಿಸಿದೆ.

Advertisement

ಬಾಲಕಿ  ಆದಿತ್ಯಶ್ರೀ ಮೂರನೇ ತರಗತಿಯಲ್ಲಿ ಓದುತ್ತಿದ್ದಳು. ಮೊಬೈಲ್‌ ಸ್ಫೋಟಕ್ಕೆ ನಿಖರವಾದ ಕಾರಣ ಏನೆಂದು ಫಾರೆನಿಕ್ಸ್‌ ವರದಿ ಬಳಿಕವಷ್ಟೇ ತಿಳಿದು ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next