Advertisement

ಪಾಕ್ ವಿರುದ್ದ ರೋಮಾಂಚನಕಾರಿ ಗೆಲುವು: ಭಾರತದೆಲ್ಲೆಡೆ ಸಂಭ್ರಮಾಚರಣೆ

11:02 PM Oct 23, 2022 | Team Udayavani |

ನವದೆಹಲಿ : ಪಾಕಿಸ್ಥಾನ ವಿರುದ್ದ ಭಾನುವಾರ ನಡೆದ ಐಸಿಸಿ ಟಿ20 ವಿಶ್ವಕಪ್ ರೋಚಕ ಹಣಾಹಣಿಯಲ್ಲಿ ಭಾರತ ತಂಡ ಗೆಲುವು ಸಾಧಿಸುತ್ತಿದ್ದಂತೆಯೇ ಭಾರತದಲ್ಲಿ ದೀಪಾವಳಿ ಸಂಭ್ರಮ ಇನ್ನೂ ಹೆಚ್ಚಿದ್ದಾಗಿದ್ದು ದೇಶದೆಲ್ಲೆಡೆ ಪಟಾಕಿ ಹಚ್ಚಿ ಸಂಭ್ರಮಿಸಲಾಗುತ್ತಿದೆ.

Advertisement

ಸಾಂಪ್ರದಾಯಿಕ ಎದುರಾಳಿ ವಿರುದ್ದ ಸೋಲಿನ ಸುಳಿಗೆ ಸಿಲುಕಿದ್ದ ಭಾರತ ತಂಡ ಗೆಲುವಿನ ದಡಕ್ಕೆ ಬಂದಿದ್ದು ದೀಪಾವಳಿ ಆರಂಭದ ಮುನ್ನ ಭಾರತೀಯರಿಗೆ ಸಂಭ್ರಮದ ಬಹುದೊಡ್ಡ ಹಬ್ಬವಾಗಿದೆ. ಗೆಲುವು ಸಾಧಿಸುತ್ತಿದ್ದಂತೆ ದೇಶದ ವಿವಿಧೆಡೆ ಬೈಕ್ ರ‍್ಯಾಲಿ, ಭಾರತದ ರಾಷ್ಟ್ರ ಧ್ವಜಗಳನ್ನು ಹಿಡಿದು ಕೊಹ್ಲಿ ಇಸ್ ಕಿಂಗ್ ಎಂಬ ಘೋಷಣೆಗಳನ್ನು ಮೊಳಗಿಸಿದ್ದಾರೆ.

ಇದನ್ನೂ ಓದಿ : ಲಾಸ್ಟ್ ಓವರ್ ಹೈ ಡ್ರಾಮಾ.. ಕೊಹ್ಲಿ ಪಟಾಕಿಗೆ ಮೆಲ್ಬರ್ನ್ ನಲ್ಲಿ ದೀಪಾವಳಿ

ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಸೇರಿದ್ದ 90,000ಕೊ ಹೆಚ್ಚು ಮಂದಿ ಅಭಿಮಾನಿಗಳ ಅಬ್ಬರದ ನಡುವೆ ನಡೆದ ಟಿ 20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ಥಾನದ ವಿರುದ್ಧ ಭಾರತ ನಾಲ್ಕು ವಿಕೆಟ್‌ಗಳ ಗೆಲುವಿನ ಮಹಾಕಾವ್ಯ ಬರೆಯಲು ಶಕ್ತಿ ತುಂಬಿದ ಕೊಹ್ಲಿ ಯುಗಯುಗಗಳ ನಾಯಕ ಎಂದು ಸಾಮಾಜಿಕ ತಾಣಗಳಲ್ಲಿ ಹಾಡಿ ಹೊಗಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next