Advertisement
ಕಳೆದ ಸೋಮವಾರ(ಡಿ.23) ಮೂರು ವರ್ಷದ ಬಾಲಕಿ ತನ್ನ ತಂದೆಯ ಜೊತೆಯಲ್ಲಿ ಜಮೀನಿಗೆ ಹೋದ ವೇಳೆ ಆಟವಾಡುತ್ತಿರುವ ವೇಳೆ ಸುಮಾರು 700 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದಿದೆ ಘಟನೆ ನಡೆದ ಬಳಿಕ ಬಾಲಕಿಯ ರಕ್ಷಣಾ ಕಾರ್ಯಾಚರಣೆ ನಡೆಸಲು ಜಿಲ್ಲಾಡಳಿತ ಮುಂದಾಗಿದೆ, ಸ್ಥಳದಲ್ಲಿ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಸೇರಿದಂತೆ ಅಧಿಕಾರಿಗಳು ಮತ್ತು ರಕ್ಷಣಾ ತಂಡಗಳು ಬಾಲಕಿಯನ್ನು ಸುರಕ್ಷಿತವಾಗಿ ಹೊರತರಲು ಅವಿರತ ಶ್ರಮಿಸುತ್ತಿದೆ ಆದರೆ ಇಂದಿಗೆ ನಾಲ್ಕು ದಿನಗಳು ಕಳೆದಿದ್ದು ಬಾಲಕಿಯ ಸ್ಥಿತಿ ಹದಗೆಡುತ್ತಿದೆ ಬಾಲಕಿಗೆ ಪೈಪ್ ಮೂಲಕ ಆಕ್ಸಿಜನ್ ವ್ಯವಸ್ಥೆಯನ್ನು ಮಾಡಲಾಗಿದೆ ಸದ್ಯ ಕೊಳವೆ ಬಾವಿಗೆ ಸಮಾನಾಂತರವಾಗಿ ಸುರಂಗ ಕೊರೆಯುವ ಕಾರ್ಯ ನಡೆಯುತ್ತಿದ್ದು ಇಂದಿಗೆ ಕಾರ್ಯಾಚರಣೆ ಪೂರ್ಣಗೊಳಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
Related Articles
Advertisement
ಇದನ್ನೂ ಓದಿ: Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್