Advertisement

3 ಅಮೆರಿಕನ್‌ ರಾಜ್ಯಗಳಲ್ಲಿ ಆ. 15 ಭಾರತೀಯ ದಿನ

09:06 AM Aug 17, 2022 | Team Udayavani |

ವಾಷಿಂಗ್ಟನ್‌: ಅಮೆರಿಕದ ಮೂರು ರಾಜ್ಯಗಳಾದ ಮಸಾಚುಸೆಟ್ಸ್‌, ರೋಡ್‌ ಐಲ್ಯಾಂಡ್‌ ಮತ್ತು ನ್ಯೂ ಹ್ಯಾಂಪ್‌ಶೈರ್‌ ಭಾರತೀಯ ಸ್ವಾತಂತ್ರ್ಯ ದಿನವಾದ ಆಗಸ್ಟ್‌ 15ನ್ನು ಭಾರತೀಯ ದಿನ ಎಂಬುದಾಗಿ ಘೋಷಿಸಿವೆ.

Advertisement

ಯುವ ಹುಮ್ಮಸ್ಸು ತುಂಬಿರುವ ದೇಶ ತನ್ನ 76ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿದೆ. ಸ್ವಾತಂತ್ರ್ಯದ ಬಳಿಕ ಆಧುನಿಕ ಭಾರತವು ಶಿಕ್ಷಣ, ಆರೋಗ್ಯ, ಕೃಷಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಟಿಯಿಲ್ಲದ ಪ್ರಗತಿಯನ್ನು ಸಾಧಿಸಿದೆ ಎಂದು ಈ ಸಂದರ್ಭದಲ್ಲಿ ಮಸಾಚುಸೆಟ್ಸ್‌ನ ಗವರ್ನರ್‌ ಸಿ. ಬೇಕರ್‌ ಶ್ಲಾಘಿಸಿದ್ದಾರೆ.

ಈ ಭಾರತೀಯ ದಿನವನ್ನು ಎಲ್ಲರೂ ಸೇರಿ ಆಚರಿಸುವಂತೆ ರೋಡ್‌ ಐಲ್ಯಾಂಡ್‌ ಗವರ್ನರ್‌ ಡೇನಿಯಲ್‌ ಮೆಕೀ ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next