Advertisement

ಗೃಹ ಸಾಲ ಮೊತ್ತ ಹೆಚ್ಚಳ

04:14 PM Jun 20, 2018 | Sharanya Alva |

ಮುಂಬೈ: ಗೃಹ ಸಾಲ ಕ್ಷೇತ್ರಕ್ಕೆ ಸಂಬಂಧಿಸಿ ಮಂಗಳವಾರ ಆರ್‌ಬಿಐ ಮಹತ್ವದ ಬದಲಾವಣೆಗಳನ್ನು ಮಾಡಿದೆ. 45 ಲಕ್ಷ ರೂ. ವರೆಗಿನ ಮೌಲ್ಯದ ಸಾಲದ ಮೊತ್ತವನ್ನು ಆದ್ಯತಾ ವಲಯ ಎಂದು ಪರಿಗಣಿಸಲು ನಿರ್ಧರಿಸಾಗಿದೆ. 

Advertisement

ಇದುವರೆಗೆ ಅದರ ಮೊತ್ತ 35 ಲಕ್ಷ ರೂ. ಆಗಿತ್ತು. ಹತ್ತು ಲಕ್ಷ ಜನಸಂಖ್ಯೆವರೆಗೆ ಇರುವ ಮೆಟ್ರೋಪಾಲಿಟನ್‌ ನಗರ ವ್ಯಾಪ್ತಿಯಲ್ಲಿ ಈ ನಿಯಮ ಅನ್ವಯವಾಗುತ್ತದೆ. ಇತರ ಕೇಂದ್ರಗಳಲ್ಲಿ 30 ಲಕ್ಷ ರೂ. ಎಂದು ಮಿತಿಗೊಳಿಸಲಾಗಿದೆ.
ಆರ್ಥಿಕವಾಗಿ ಹಿಂದುಳಿದ ಮತ್ತು ಕಡಿಮೆ ಆದಾಯದ

ಗುಂಪುಗಳಿಗೆ ವಸತಿ ಸೌಲಭ್ಯ ನೀಡುವ ನಿಟ್ಟಿನಲ್ಲಿ ಈ ಬದಲಾವಣೆ ಮಾಡಲಾಗಿದೆ. ಆದ್ಯತಾ ವಲಯದಲ್ಲಿ ನೀಡುವ ಸಾಲಕ್ಕೆ ಬಡ್ಡಿ ದರ ಕಡಿಮೆಯಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next