Advertisement

ಭಾರತಕ್ಕೆ ಮೂರು ರಫೇಲ್‌ ಯುದ್ಧ ವಿಮಾನ ಹಸ್ತಾಂತರ

09:34 AM Nov 23, 2019 | Team Udayavani |

ಹೊಸದಿಲ್ಲಿ: ಭಾರತ ಸರಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ಫ್ರಾನ್ಸ್‌ನ ಡಸ್ಸಾಲ್ಟ್ ಯುದ್ಧ ವಿಮಾನ ತಯಾರಿಕೆ ಕಂಪೆನಿ ತನ್ನ ಮೊದಲ ಕಂತಿನ ಮೂರು ರಫೇಲ್‌ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸಿದೆ. ಈ ಯುದ್ಧ ವಿಮಾನಗಳನ್ನು ಭಾರತದ ಪೈಲಟ್‌ಗಳು, ತಂತ್ರಜ್ಞರ ತರಬೇತಿಗೆ ಬಳಸಿಕೊಳ್ಳಲಾಗುವುದು ವಾಯುಪಡೆ ಮೂಲಗಳು ತಿಳಿಸಿವೆ.

Advertisement

ಅ.8ರಂದು ಮೊದಲ ರಫೇಲ್‌ ಯುದ್ಧವಿಮಾನವನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಫ್ರಾನ್ಸ್‌ನಲ್ಲಿ ಸ್ವೀಕರಿಸಿದ್ದರು. ಮುಂದಿನ 2020 ಮೇ ಒಳಗಾಗಿ ಮೊದಲ ಬ್ಯಾಚ್‌ನ ನಾಲ್ಕು ರಫೇಲ್‌ ಯುದ್ಧ ವಿಮಾನಗಳು ಭಾರತಕ್ಕೆ ಬರಲಿವೆ.

2016ರಲ್ಲಿ 36 ರಫೇಲ್‌ ಯುದ್ಧ ವಿಮಾನ ಪೂರೈಕೆಗೆ ಭಾರತ ಸರಕಾರ ಫ್ರಾನ್ಸ್‌ ಜತೆಗೆ 59 ಸಾವಿರ ಕೋಟಿ ರೂ. ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿತ್ತು. ಸುಪ್ರೀಂಕೋರ್ಟ್‌ ರಫೇಲ್‌ ಅವ್ಯವಹಾರ ಕುರಿತ ಅರ್ಜಿಯನ್ನು ತಳ್ಳಿ ಹಾಕಿದ ಬೆನ್ನಲ್ಲೇ, ರಫೇಲ್‌ ಹಸ್ತಾಂತರವಾದ ಸುದ್ದಿಯೂ ಹೊರಬಿದ್ದಿದೆ. ಆದರೆ ಈ ಎರಡು ರಫೇಲ್‌ ಯುದ್ಧ ವಿಮಾನಗಳು ಹಸ್ತಾಂತರವಾದ ನಿರ್ದಿಷ್ಟ ದಿನಾಂಕವನ್ನು ಕೇಂದ್ರ ಸರಕಾರ ಬಹಿರಂಗಪಡಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next