Advertisement

ONGCಗೆ ಸೇರಿದ ಮೂವರು ಉದ್ಯೋಗಿಗಳ ಅಪಹರಣ : ಉಗ್ರರು ಅಪಹರಿಸಿರುವ ಶಂಕೆ

08:01 PM Apr 21, 2021 | Team Udayavani |

ನವದೆಹಲಿ: ಅಸ್ಸಾಂನ ಶಿವಸಾಗರ ಜಿಲ್ಲೆಯಲ್ಲಿರುವ ತೈಲ ಮತ್ತು ಜೈವಿಕ ಅನಿಲ ನಿಗಮಕ್ಕೆ (ಒಎನ್‌ಜಿಸಿ) ಸೇರಿದ ಮೂವರು ಉದ್ಯೋಗಿಗಳನ್ನು ಶಂಕಿತ ಉಗ್ರರು ಅಪಹರಿಸಿದ್ದಾರೆ. ಬುಧವಾರ ಬೆಳಬೆಳಗ್ಗೆಯೇ ಒಎನ್‌ಜಿಸಿ ವಾಹನದಲ್ಲೇ ಉದ್ಯೋಗಿಗಳನ್ನು ಒಯ್ಯಲಾಗಿದೆ.

Advertisement

ನಂತರ ವಾಹನವನ್ನು ಅಸ್ಸಾಂ-ನಾಗಾಲ್ಯಾಂಡ್‌ ಗಡಿಭಾಗವಾದ ನಿಮೊನಾಗಢ ಎಂಬ ಅರಣ್ಯಪ್ರದೇಶದಲ್ಲಿ ಬಿಟ್ಟು ತೆರಳಲಾಗಿದೆ. ಈ ಕೃತ್ಯವನ್ನು ಶಸ್ತ್ರಸಜ್ಜಿತ “ಉಲ್ಫಾ’ಗೆ (ಯುನೈಟೆಡ್‌ ಲಿಬರೇಷನ್‌ ಫ್ರಂಟ್‌ ಆಫ್ ಅಸ್ಸಾಂ) ಸೇರಿದ ಉಗ್ರರು ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಊಹಿಸಿದ್ದಾರೆ.

ಅಪಹರಣಗೊಂಡವರಲ್ಲಿ ಇಬ್ಬರು ಕಿರಿಯ ಸಹಾಯಕ ಎಂಜಿನಿಯರ್‌ಗಳು, ಕಿರಿಯ ತಾಂತ್ರಿಕ ಸಿಬ್ಬಂದಿ ಸೇರಿದ್ದಾರೆ. ಮೂವರನ್ನು ಕ್ರಮವಾಗಿ ಮೋಹನ್‌ ಗೊಗೊಯಿ, ರಿತುಲ್‌ ಸೈಕಿಯಾ, ಅಲೋಕೇಶ್‌ ಸೈಕಿಯಾ ಎಂದು ಗುರುತಿಸಲಾಗಿದೆ. ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ ಅಪಹರಣಕಾರರ ಬೇಡಿಕೆಯೇನು ಎಂಬ ಬಗ್ಗೆ ಖಚಿತ ಮಾಹಿತಿ ದೊರಕಿಲ್ಲ.

ಇದನ್ನೂ ಓದಿ :ನಗರಸಭೆ ಅಧಿಕಾರಿಗಳ ಧಿಡೀರ್ ಕಾರ್ಯಾಚರಣೆ: ಮಾಸ್ಕ್ ಧರಿಸದವರಿಂದ 18,900 ಸಾವಿರ ದಂಡ ವಸೂಲಿ

Advertisement

Udayavani is now on Telegram. Click here to join our channel and stay updated with the latest news.

Next